ಬಿಹಾರ| ಶಾಂತಿ ಕಾಪಾಡಿರಿ: ಕಾರ್ಯಕರ್ತರಿಗೆ ಆರ್‌ಜೆಡಿ ಮನವಿ

0
436

ಸನ್ಮಾರ್ಗ ವಾರ್ತೆ

ಪಾಟ್ನ,ನ.9: ಬಿಹಾರ ಚುನಾವಣೆಯಲ್ಲಿ ಫಲಿತಾಂಶ ಹೇಗೆಯೇ ಇರಲಿ ಮತ ಎಣಿಕೆ ದಿನ ಶಿಸ್ತು ಕಾಪಾಡಿ ಎಂದು ಕಾರ್ಯಕರ್ತರಿಗೆ ರಾಷ್ಟ್ರೀಯ ಜನತಾದಳ ಮುನ್ನೆಚ್ಚರಿಕೆ ನೀಡಿದೆ. ಪಟಾಕಿ ಸಿಡಿಸಬೇಡಿ, ಕೆಟ್ಟದಾಗಿ ವರ್ತಿಸಬೇಡಿ ಮತ್ತು ರಾಜಕೀಯ ವಿರೋಧಿಗಳೊಂದಿಗೆ ಸಂಭಾವಿತರಂತೆ ವರ್ತಿಸಿ ಎಂದು ಪಾರ್ಟಿ ಸೂಚನೆ ನೀಡಿದೆ.

ನವೆಂಬರ್ 10ಕ್ಕೆ ಮತ ಎಣಿಕೆ ನಡೆಯಲಿದೆ. ಫಲಿತಾಂಶ ಯಾವುದೇ ಆದರೂ ನಾವು ಮಾನ್ಯವಾಗಿ ವರ್ತಿಸಬೇಕು. ಶಾಂತಿ ಕಾಪಾಡಬೇಕಾಗಿದೆ. ಕಾರ್ಯಕರ್ತರು ಪಟಾಕಿ, ಬಣ್ಣ ಎರಚುವುದಿತ್ಯಾಗಿ ಮಾಡಬೇಡಿ. ವಿಜಯದ ಆವೇಶದಲ್ಲಿ ಯಾರೂ ಶಿಷ್ಟಾಚಾರವನ್ನು ಮೀರಬಾರದೆಂದು ಆರ್‌ಜೆಡಿ ಟ್ವೀಟ್ ಮಾಡಿದೆ.

ಚುನಾವಣೆಯ ಗೆಲುವಿಗಿಂತಲೂ ಮಿಗಿಲಿನದು ನಾಡಿನ ಉನ್ನತಿ, ಜನರಿಗೆ ಸೌಕರ್ಯ ಒದಗಿಸುವುದು ನಿಮ್ಮ ರಾಜಕೀಯದ ಕೇಂದ್ರ ಬಿಂದು ಎಂದು ಪಾರ್ಟಿ ಇನ್ನೊಂದು ಟ್ವೀಟ್‍ನಲ್ಲಿ ಕಾರ್ಯಕರ್ತರನ್ನು ನೆನಪಿಸಿದೆ. ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಕಾಂಗ್ರೆಸ್ ಎಡಪಕ್ಷಗಳ ಮಹಾಘಟ್ಬಂಧನ್ ಮತ್ತು ನಿತೀಶ್ ಕುಮಾರ್‌ರ ನೇತೃತ್ವದ ಜೆಡಿಯು ಬಿಜೆಪಿಯೊಂದಿಗಿನ ಎನ್‍ಡಿಎ ಸಖ್ಯದ ನಡುವೆ ಚುನಾವಣೆಯಲ್ಲಿ ಪರಸ್ಪರ ಕಠಿಣ ಹೋರಾಟ ನಡೆದಿದೆ.