ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ನ.10: ನಿಯೋಜಿತ ಅಮೆರಿಕ ಅಧ್ಯಕ್ಷ ಜೊ ಬೈಡನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್ ಮುಖ್ಯ ಅತಿಥಿಯಾಗಲಿದ್ದಾರೆ ಎನ್ನುವುದು ಸುಳ್ಳುಪ್ರಚಾರವಾಗಿದೆ. ಬೈಡನ್ ಕಚೇರಿಯಿಂದ ಯಾವುದೇ ಸೂಚನೆ ನಮಗೆ ಲಭಿಸಿಲ್ಲ ಎಂದು ಮನ್‍ಮೋಹನ್ ಸಿಂಗ್‍ರ ಕಚೇರಿ ಮೂಲಗಳು ಇಂಡಿಯಾ ಟುಡೆಗೆ ತಿಳಿಸಿವೆ.
ಜೋ ಬೈಡನ್ ಮನ್‍ಮೋಹನ್ ಸಿಂಗ್‍ರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬುದು ನಿಜ. ಬೈಡನ್ ಅಮೆರಿಕದ ಸೆನೆಟ್‍ನ ವಿದೇಶ ಸಮಿತಿಯ ಅಧ್ಯಕ್ಷರಾಗಿದ್ದಾಗ 2008ರಲ್ಲಿ ಭಾರತದೊಂದಿಗೆ ಅಣುಒಪ್ಪಂದಕ್ಕೆ ಸಹಿ ಹಾಕಿದ್ದರು. ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರೆಯುವ ಸಂಪ್ರದಾಯವಿಲ್ಲ. ವಿಶೇಷ ವ್ಯಕ್ತಿಗಳನ್ನು ಕರೆಯಲಾಗುವುದಾದರೂ ಜನೆವರಿ 20ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಈವರೆಗೆ ಯಾರನ್ನೂ ಕರೆದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್‍ರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು. ಆದ್ದರಿಂದ ಮನ್‍ಮೋಹನ್ ಸಿಂಗ್‍ರನ್ನು ಬೈಡನ್ ಕರೆದಿದ್ದಾರೆ ಎಂದು ಪ್ರಚಾರವಾಗಿತ್ತು. ಬಿಜೆಪಿ ಸರಕಾರದ ಪೌರತ್ವ ತಿದ್ದುಪಡಿ ಕಾನೂನು ಕಾಶ್ಮೀರದ ಕುರಿತ ಕೇಂದ್ರ ಸರಕಾರದ ನಿಲುವಿನ ವಿರುದ್ಧ ಬೈಡನ್ ಮಾತಾಡಿದ್ದರು.












