ಮಿತಿ ಮೀರಬೇಡಿ: ರಿಪಬ್ಲಿಕ್, ಟೈಮ್ಸ್ ನೌಗೆ ದಿಲ್ಲಿ ಹೈಕೋರ್ಟ್ ತಾಕೀತು

0
626

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.10: ಆಕ್ಷೇಪಾರ್ಹವಾದ ಸಾರಾಂಶಗಳನ್ನು ಪ್ರಸಾರ ಮಾಡಬಾರದು ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹ ವೀಡಿಯೊ ಹಾಕಬಾರದು ಎಂದು ರಿಪಬ್ಲಿಕ್ ಟಿವಿ, ಟೈಮ್ಸ್ ನೌಗೆ ದಿಲ್ಲಿ ಹೈಕೋರ್ಟು ಸೂಚಿಸಿದೆ. ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿ ತಮ್ಮ ವಿರುದ್ಧ ಅವಮಾನಕಾರಿ ಟೀಕೆಗಳನ್ನು ಮಾಡಿದ ಎರಡು ಚ್ಯಾನೆಲ್‍ಗಳ ವಿರುದ್ಧ ಬಾಲಿವುಡ್ ನಿರ್ಮಾಪಕರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವ ವೇಳೆ ದಿಲ್ಲಿ ಹೈಕೋರ್ಟು ತಾಕೀತು ನೀಡಿದೆ. ಎರಡು ವಾರದೊಳಗೆ ಉತ್ತರಿಸಬೇಕೆಂದು ಎರಡು ಚ್ಯಾನೆಲ್‍ಗಳಿಗೂ ಹೈಕೋರ್ಟು ತಿಳಿಸಿದೆ.

ಮಾಧ್ಯಮಗಳಿಗೆ ಸಮಾಂತರ ವಿಚಾರಣೆಯೊಂದಿಗೆ ಮುಂದೆ ಹೋಗಲು ಆಗದು ಎಂದು ಕೋರ್ಟು ತೀರ್ಮಾನಿಸಿತು. ನೀವು ವಾರ್ತಾ ಚ್ಯಾನೆಲ್‍ಗಳು ಮಾತ್ರ. ವಾರ್ತೆ ತೋರಿಸಿ. ಆದರೆ, ಕೆಲವು ವಾರ್ತೆಗಳಲ್ಲಿ ಮಿತಿಮೀರಿದ ಅಭಿಪ್ರಾಯಗಳು ಬರುತ್ತಿವೆ. ವಿಷಯಗಳನ್ನು ಪೂರ್ವಭಾವಿಯಾಗಿ ತೀರ್ಪು ನೀಡುತ್ತೀರಿ. ಬಾಲಿವುಡ್ ನಟರಿಗೆ ಖಾಸಗಿತ್ವದ ಹಕ್ಕಿದೆ. ಡಯಾನ ರಾಜಕುಮಾರಿಗೆ ಏನು ಸಂಭವಿಸಿತೆಂದು ನೋಡಿ. ಮಾಧ್ಯಮಗಳು ಬೆನ್ನತ್ತಿದ್ದರಿಂದ ಅವರು ಮೃತಪಟ್ಟರು. ಇದೇ ರೀತಿ ಆಗಬಾರದೆಂದು ಎರಡು ಚ್ಯಾನೆಲ್‍ಗಳಿಗೆ ಹೈಕೋರ್ಟು ಎಚ್ಚರಿಕೆ ನೀಡಿತು.

38 ನಿರ್ಮಾಪಕರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಿಪಬ್ಲಿಕ್‍ನ ಅರ್ನಾಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ ಮತ್ತು ಟೈಮ್ಸ್ ನೌ‌ನ ರಾಹುಲ್ ಶಿವಶಂಕರ್, ನಾವಿಕಾಕುಮಾರ್‌ರ ಹೇಳಿಕೆಗಳನ್ನು ಕೋರ್ಟು ಬೊಟ್ಟು ಮಾಡಿ ಅರ್ಜಿ ಸಲ್ಲಿಸಲಾಗಿತ್ತು. ಬೇಜವಾಬ್ದಾರಿ ವರದಿಗಳಿಗೆ ಕೋರ್ಟಿನ ತೀರ್ಪಿಗೊಳಗಾದವರು ದಂಡ ತೆರಬೇಕಾಗಿ ಬರಬಹುದು. ಮಾದಕದ್ರವ್ಯ ಆರೋಪದ ನಂತರ ನಟಿ-ನಟರ ಐಎಸ್‍ಐ ಸಂಬಂಧದವರೆಗೆ ಎಳೆದು ಹಾಕಲಾಗಿದೆ ಎಂದು ವಕೀಲರು ಹೇಳಿದ್ದಾರೆ.