ABVP ವಿರೋಧ ಹಿನ್ನೆಲೆ: ಅರುಂಧತಿ ರಾಯ್ ಪುಸ್ತಕ ಪಠ್ಯಕ್ರಮದಿಂದ ಹೊರಗೆ

0
520

ಸನ್ಮಾರ್ಗ ವಾರ್ತೆ

ಚೆನ್ನೈ,ನ.12: ಸಂಘಪರಿವಾರ ವಿರೋಧಿಸಿದ್ದರಿಂದ ಅರುಂಧತಿ ರಾಯ್‍ರವರ ಪುಸ್ತಕವನ್ನು ತಿರುನೆಲ್ವೇಲಿಯ ಮನೋನ್ಮಮಾನಿಯಂ ಸುಂದರನಾರ್ ವಿಶ್ವವಿದ್ಯಾಲಯ ಪಠ್ಯಕ್ರಮದಿಂದ ತೆರವುಗೊಳಿಸಿದೆ. ವಾಕಿಂಗ್ ವಿದ್ ಕಾಮ್ರೆಡ್ ಇಂಗ್ಲಿಷ್ ಎಂಎ ಪದವಿಯ ಪಠ್ಯಕ್ರಮದಲ್ಲಿತ್ತು. ಮಾವೋವಾದಿಗಳ ಅಡಗುತಾಣ ಸಂದರ್ಶಿಸಿದ ಬಳಿಕ ಅರುಂಧತಿ ರಾಯ್ ವಾಕಿಂಗ್ ವಿದ್ ಕಾಮ್ರೆಡ್ಸ್ ಪುಸ್ತಕ ಬರೆದಿದ್ದರು

ಎಬಿವಿಪಿ ಈ ಪುಸ್ತಕವನ್ನು ವಿರೋಧಿಸಿ ರಂಗ ಪ್ರವೇಶಿಸಿತ್ತು. ವೈಸ್‍ಚಾನ್ಸಲರ್ ಕೆ. ಪಿಚ್ಚುಮಣಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪುಸ್ತಕವನ್ನು ಹಿಂಪಡೆಯಲು ತೀರ್ಮಾನವಾಗಿದೆ. ಎಂ.ಕೃಷ್ಣನ್‍ರ ಮೈ ನೇಟಿವ್ ಲ್ಯಾಂಡ್; ಎಸ್ಸೇಸ್ ಆನ್ ನೇಚರ್ ಅನ್ನು ಪಠ್ಯಕ್ರಮಕ್ಕೆ ಸೇರಿಸಲಾಗಿದೆ. 2017ರಿಂದ ವಾಕಿಂಗ್ ವಿದ್ ಕಾಮ್ರಡ್ಸ್ ಪಠ್ಯಕ್ರಮದ ಭಾಗವಾಗಿತ್ತು. ಒಂದು ವಾರದ ಹಿಂದೆ ಅರುಂಧತಿ ರಾಯ್ ಪುಸ್ತಕದಲ್ಲಿ ಮಾವೋವಾದಿಗಳನ್ನು ವೈಭವೀಕರಿಸಿದ್ದಾರೆ ಎಂದು ನೋಟಿಸು ಅಂಟಿಸಲಾಗಿತ್ತು. ನಂತರ ಒಂದು ಸಮಿತಿ ರೂಪಿಸಿ ಚರ್ಚೆ ಮಾಡಿದ ಬಳಿಕ ಪುಸ್ತಕವನ್ನು ಹಿಂಪಡೆಯಲು ತೀರ್ಮಾನಿಸಿದೆವು ಎಂದು ವೈಸ್ ಚಾನ್ಸಲರ್ ಕೆ. ಪಿಚ್ಚುಮಣಿ ಹೇಳಿದರು.

ಈ ಪುಸ್ತಕ ಮುದ್ರಣವಾಗುವ ಮೊದಲು ಔಟ್‍ಲುಕ್‍ನಲ್ಲಿ ಲೇಖನವಾಗಿ ಬಂದಿತ್ತು. ವಿದ್ಯಾರ್ಥಿಗಳಲ್ಲಿ ಮಾವೋವಾದಿ ನಕ್ಸಲ್ ನೀತಿಯನ್ನು ಹೇರಲಾಗುತ್ತಿದೆ ಎಂದು ಎಬಿವಿಪಿ ನಾಯಕ ಸಿ.ವಿಗ್ನೇಶ್ ಹೇಳಿದರು. ಪುಸ್ತಕ ಹಿಂಪಡೆಯದಿದ್ದರೆ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆಯುವೆವು ಎಂದೂ ಪ್ರತಿಭಟನೆ ಶುರುಮಾಡಲಾಗುವುದೆಂದು ವಿಗ್ನೇಶ್ ಬೆದರಿಕೆ ಹಾಕಿದ್ದರು. ದೇಶದಲ್ಲಿ ಅತೀಹೆಚ್ಚು ಆಂತರಿಕ ಸುರಕ್ಷೆಗೆ ಬೆದರಿಕೆಯೊಡ್ಡುತ್ತಿರುವ ಮಾವೋವಾದಿಗಳನ್ನು ವೈಭವೀಕರಿಸಲಾಗಿದೆ ಎಂದು ಸಂಘಪರಿವಾರ ಸಂಘಟನೆಗಳು ಹೇಳುತ್ತಿವೆ.