ಮುಖ್ಯಮಂತ್ರಿಯಾಗಿ ಸೋಮವಾರ ನಿತೀಶ್ ಕುಮಾರ್ ಪ್ರಮಾಣ ವಚನ

0
381

ಸನ್ಮಾರ್ಗ ವಾರ್ತೆ

ಪಾಟ್ನ,ನ.12: ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದಾಗಿ ವರದಿಯಾಗಿದೆ. ಎನ್‍ಡಿಎ ಸಖ್ಯ ಬಹುಮತ ಗಳಿಸಿದ್ದು, ನಿತೀಶ್‍ರನ್ನು ಉನ್ನತ ಬಿಜೆಪಿ ನಾಯಕರು ಭೇಟಿಯಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೇ ನಿತೀಶ್‍ರಿಗೆ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದರು. ಸೋಮವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿವೆ. ಪುನಃ ಅಧಿಕಾರಕ್ಕೆ ಬಂದಿರುವುದರಿಂದ ಅವರು ಬಿಹಾರದಲ್ಲಿ ಅತಿ ಹೆಚ್ಚು ಕಾಲವಧಿಯವರಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ವ್ಯಕ್ತಿಯಾಗಲಿದ್ದಾರೆ.

ದೀಪಾವಳಿಯ ಬಳಿಕವೇ ಸರಕಾರ ರಚಿಸುವುದಾಗಿ ಮತ್ತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎರಡು ಪಾರ್ಟಿಯ ನಾಯಕರು ತಿಳಿಸಿದ್ದಾರೆ. ಶನಿವಾರ ದೀಪಾವಳಿ ಹಬ್ಬವಾಗಿದೆ. ಆದರೆ ಮುಖ್ಯಮಂತ್ರಿಗೆ ಸಂಬಂಧಿಸಿದ ಮುಖ್ಯ ಖಾತೆಗಳ ಕುರಿತು ಸಖ್ಯ ಪಕ್ಷಗಳ ನಡುವೆ ಅಂತಿಮ ತೀರ್ಮಾನವಾಗಿಲ್ಲ.

ಗೃಹ, ಶಿಕ್ಷಣ ಸಹಿತ ಪ್ರಧಾನ ಖಾತೆಗಳಲ್ಲಿ ಬಿಜೆಪಿ ಬೇಡಿಕೆ ಇರಿಸಿದೆ. ಈ ಕುರಿತು ತೀರ್ಮಾನ ಅಂತಿಮಗೊಂಡ ಮೇಲೆ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಶೀಘ್ರದಲ್ಲಿಯೇ ಚುನಾಯಿತ ಶಾಸಕರ ಸಭೆ ನಡೆಯಲಿದ್ದು, ದಿನಾಂಕ ನಿಗದಿಯಾಗಿಲ್ಲ. ಜೆಡಿಯು ವಿರುದ್ಧ ಪ್ರಚಾರ ಮಾಡಿದ ಎಲ್‍ಜೆಪಿಯೊಂದಿಗೆ ಬಿಜೆಪಿಯ ಯಾವ ನಿಲುವು ಸ್ವೀಕರಿಸಲಿದೆ ಎಂಬುದು ಸರಕಾರ ರಚನೆಯಲ್ಲಿ ನಿರ್ಣಾಯಕವೆನಿಸಲಿದೆ.