ಮುಂಬೈ,ನ.18: ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ ರಾಜೀನಾಮೆ ನೀಡಿದ ನಂತರ ಮತ್ತೋರ್ವ ಉನ್ನತ ಬಿಜೆಪಿ ನಾಯಕ ಜೆಸಿಂಗ್ ರಾವ್ ಗಾಯಕ್ವಾಡ್ ರಾಜೀನಾಮೆ ನೀಡಿದ್ದಾರೆ. ಖಡ್ಸೆ ಬಿಜೆಪಿ ತೊರೆದು ಎನ್ಸಿಪಿಗೆ ಸೇರ್ಪಡೆಯಾಗಿದ್ದಾರೆ. ಜೈಸಿಂಗ್ ರಾವ್ ಗಾಯಕ್ವಾಡ್ ಮಾಜಿ ಕೇಂದ್ರ ಸಚಿವರಾಗಿದ್ದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ವಿರುದ್ಧ ಆರೋಪ ಹೊರಿಸಿದ್ದಾರೆ. ಅವರು ತನಗೆ ಪಾರ್ಟಿಯಲ್ಲಿ ಯಾವುದೇ ಜವಾಬ್ದಾರಿ ನೀಡದೇ ಸತಾಯಿಸುತ್ತಿದ್ದಾರೆ ಎಂದು ಗಾಯಕ್ವಾಡ್ ಹೇಳಿದರು.
ಪಾರ್ಟಿಗೆ ಕೆಲಸ ಮಾಡಲು ಸಿದ್ಧ. ಆದರೆ ಪಾರ್ಟಿ ತನಗೆ ಅವಕಾಶ ನೀಡುವುದಿಲ್ಲ. ಆದ್ದರಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜೈಸಿಂಗ್ ರಾವ್ ಹೇಳಿದರು. ವರ್ಷಗಳ ಕಾಲ ಯಾವುದೇ ಜವಾಬ್ದಾರಿಯನ್ನು ನೀಡದೆ ತನ್ನನ್ನು ಪಾರ್ಟಿ ನಾಯಕತ್ವ ಕಡೆಗಣಿಸಿದೆ ಎಂದು ಗಾಯಕ್ವಾಡ್ ಹೇಳಿದರು.
ಪಾರ್ಟಿಯನ್ನು ಬಲಪಡಿಸಲು ಕೆಲಸ ಮಾಡಬೇಕೆಂದು ಬಯಸುತ್ತೇನೆ. ಕಳೆದ ಹತ್ತು ವರ್ಷಗಳಿಂದ ಅಂತಹ ಜವಾಬ್ದಾರಿ ಕೊಡಬೇಕೆಂದು ಹೇಳುತ್ತಾ ಬಂದೆ. ಆದರೆ ಅದಕ್ಕೆ ಅವಕಾಶವೇ ನೀಡಿಲ್ಲ. ರಾಜ್ಯದಲ್ಲಿ ಪಾರ್ಟಿಯನ್ನು ಬೆಳೆಸಲು ಪ್ರಯತ್ನಿಸಿದವರು ಪಾರ್ಟಿಗೆ ಅಗತ್ಯವಿಲ್ಲ ಎಂದು ಜೈಸಿಂಗ್ ಹೇಳಿದರು. ಗಾಯಕ್ವಾಡ್ ರಾಜೀನಾಮೆ ಕುರಿತು ಅಧ್ಯಕ್ಷ ಚಂದ್ರ ಕಾಂತ್ ಪಾಟೀಲ್ ಪ್ರತಿಕ್ರಿಯೆ ನೀಡಿಲ್ಲ.












