ಹಿಟ್ಲರ್ ಆಶಯದ ಆರೆಸ್ಸೆಸ್ ಮುಖ್ಯಸ್ಥರೊಂದಿಗೆ ಭೇಟಿ ಆರೋಪ: ತಮ್ಮದೇ ಹೈ ಕಮಿಷನರ್ ವಿರುದ್ಧ ಆಸ್ಟ್ರೇಲಿಯನ್ನರ ಪ್ರತಿಭಟನೆ

0
558

ಸನ್ಮಾರ್ಗ ವಾರ್ತೆ

ಸಿಡ್ನಿ,ನ.18: ನಾಗಪುರದ ಆರೆಸ್ಸೆಸ್ ಕೇಂದ್ರಕ್ಕೆ ಭೇಟಿ ನೀಡಿದ ಆಸ್ಟ್ರೇಲಿಯದ ಹೈ ಕಮಿಷನರ್ ವಿರುದ್ಧ ಆಸ್ಟ್ರೇಲಿಯದಲ್ಲಿ ಪ್ರತಿಭಟನೆ ನಡೆದಿದೆ. ಈ ಭೇಟಿ ದೇಶಕ್ಕೆ ಅವಮಾನವಾಗಿದೆ ಎಂದು ಮಾಜಿ ಆಸ್ಟ್ರೇಲಿಯನ್ ಸೆನೆಟರ್ ಲಿರಿಯಾನನ್ ಹೇಳಿದರು. ನವೆಂಬರ್ 15ರಂದು ಆಸ್ಟ್ರೇಲಿಯದ ಹೈಕಮಿಶನರ್ ಬಾರ್ರಿ ಒ ಫೆರಲ್ ಆರೆಸ್ಸೆಸ್ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಆರೆಸ್ಸೆಸ್ ಹಿಟ್ಲರನಿಂದ ಪ್ರೇರಣೆ ಪಡೆದ ವಂಶೀಯ ಆಶಯ ಮತ್ತು ತೀವ್ರ ಹಿಂದುತ್ವಕ್ಕಾಗಿರುವವರು ಆಗಿದ್ದಾರೆ ಎಂದು 2011ರಿಂದ 2018ರವರೆಗೆ ನ್ಯೂ ಸೌತ್ ವೇಲ್ಸ್ ಅನ್ನು ಪ್ರತಿನಿಧಿಸಿದ್ದ ರಿಯನ್ನೊನ್ ಹೇಳಿದರು. ಆಸ್ಟ್ರೇಲಿಯದ ಪತ್ರಕರ್ತ ಸಿ.ಜೆ. ವೆರ್ಲೆಮೆನ್, ಪೀಟರ್ ಫೆಡ್ರಿಕ್ ಸಹಿತ ಹಲವರು ಹೈ ಕಮಿಷನರ್ ವಿರುದ್ಧ ರಂಗಪ್ರವೇಶಿಸಿದ್ದು ಹೈಕಮಿಶನರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬರೆದ ಪತ್ರದಲ್ಲಿ 1300 ಮಂದಿ ಸಹಿ ಹಾಕಿದ್ದಾರೆ.

ಆದರೆ, ಆರೆಸ್ಸೆಸ್ ಕೇಂದ್ರ ಸಂದರ್ಶಿಸಿ ಕೊರೋನ ಪ್ರತಿರೋಧ ಚಟುವಟಿಕೆಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಹೋಗಿದ್ದೆ ಎಂದು ಹೈ ಕಮಿಷನರ್ ಒ ಫೆರಲ್ ಸ್ಪಷ್ಟನೆ ನೀಡಿದ್ದಾರೆ.