ಪ್ರಚಾರಕ್ಕೂ ಹೋಗದೆ ಟೀಕಿಸುವುದರಲ್ಲಿ ಅರ್ಥವೇನಿದೆ?- ಕಪಿಲ್ ಸಿಬಲ್ ವಿರುದ್ಧ ಕಾಂಗ್ರೆಸ್ ನಾಯಕರು

0
535

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.18: ಕಾಂಗ್ರೆಸ್ ಸ್ವಯಂ ವಿಮರ್ಶಾತ್ಮಕವಾಗಿ ಚಿಂತನೆ ನಡೆಸಬೇಕೆಂದ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ವಿರುದ್ಧ ಹಲವಾರು ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಲ್ಮಾನ್ ಖುರ್ಷಿದ್, ಲೋಕಸಭಾ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸಿಬಲ್‍ರನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಬಿಹಾರದಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದರಿಂದ ಬಹಿರಂಗ ವಾದ-ವಿವಾದಗಳು ಸೃಷ್ಟಿಯಾಗಿವೆ.

ಕಾಂಗ್ರೆಸ್ ಮುಂದೆ ಸಾಗುವುದರ ಬಗ್ಗೆ ಕಪಿಲ್ ಸಿಬಲ್ ತೀರ ಆತಂಕ ವ್ಯಕ್ತಪಡಿಸಿದ್ದು ಗಮನಕ್ಕೆ ಬಂದಿತ್ತು. ಆದರೆ ಬಿಹಾರ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಚುನಾವಣೆ ಪ್ರಚಾದ ವೇಳೆ ಅವರು ಕಾಣಿಸಿಲ್ಲ ಎಂದು ಅಧೀರ್ ರಂಜನ್ ಹೇಳಿದ್ದಾರೆ. ಯಾವುದಾದರೂ ರಾಜ್ಯದಲ್ಲಿ ಪ್ರಚಾರಕ್ಕೆ ಹೋಗಿದ್ದರೆ ಅವರ ಮಾತುಗಳಿಗೆ ತೂಕವಿರುತ್ತಿತ್ತು. ಏನು ಮಾಡದೆ ಸುಮ್ಮನಿದ್ದು ಅಭಿಪ್ರಾಯ ತಿಳಿಸಿದರೆ ಏನು ಪ್ರಯೋಜನ ಎಂದು ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದರು.

ಕಪಿಲ್ ಸಿಬಲ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ರಂಗ ಪ್ರವೇಶಿಸಿದ್ದರು. ಪಾರ್ಟಿಯ ಆಂತರಿಕ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಬೇಕಾದ ಅಗತ್ಯ ಇರಲಿಲ್ಲ. ದೇಶ ಇಡೀ ಇರುವ ಪಕ್ಷದ ಕಾರ್ಯಕರ್ತರ ಭಾವನೆಗೆ ಇದು ನೋವುಂಟು ಮಾಡುತ್ತದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದರು.

ಕಪಿಲ್ ಸಿಬಲ್ ವಿರುದ್ಧ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಕೂಡ ಟೀಕೆ ಮಾಡಿದ್ದಾರೆ. ಕಪಿಲ್ ಸಿಬಲ್ ಪಾರ್ಟಿಯಲ್ಲಿ ಹೇಳುವ ವೇದಿಕೆಯಿಲ್ಲ ಎಂದು ನಾಯಕತ್ವದ ವಿರುದ್ಧ ಇಂಗ್ಲಿಷ್ ಪತ್ರಿಕೆಗೆ ನೀಡಿದ ಸಂದರ್ಶನದ ವೇಳೆ ಕಪಿಲ್ ಸಿಬಲ್ ಆರೋಪ ಹೊರಿಸಿದ್ದರು. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡಿನಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಿಹಾರ ಚುನಾವಣೆಯ ಅವಲೋಕನ ನಡೆಸಲು ಕಾಂಗ್ರೆಸ್ ಇದುವರೆಗೆ ಸಭೆಯನ್ನೂ ಕರೆದಿಲ್ಲ.