ಕೊರೋನ ಪರಿಸ್ಥಿತಿ ಕೈ ಮೀರಿ ಹೋಗಬಹುದು: 4 ರಾಜ್ಯಗಳಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್

0
615

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.23: ರಾಜ್ಯಗಳು ಕೊರೋನ ಪ್ರತಿರೋಧ ಕಾರ್ಯಗಳನ್ನು ಜಾರಿಯಲ್ಲಿರಿಸದಿದ್ದರೆ ಅಹಿತಕರ ಕಾರ್ಯಗಳು ನಡೆಯಬಹುದು ಎಂದು ಸುಪ್ರೀಂ ಕೋರ್ಟು ನಿರೀಕ್ಷಿಸಿದೆ. ದಿಲ್ಲಿ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂಗಳಲ್ಲಿ ಕೊರೋನ ಪ್ರಕರಣಗಳು ಜಾಸ್ತಿಯಾಗಿದ್ದು ನಾಲ್ಕು ರಾಜ್ಯಗಳು ಎರಡು ದಿನಗಳಲ್ಲಿ ವರದಿ ನೀಡಬೇಕೆಂದು ಸುಪ್ರೀಂ ಕೋರ್ಟು ಸೂಚಿಸಿದೆ.

ಈ ತಿಂಗಳಲ್ಲಿ ಕೊರೋನ ಪ್ರಕರಣದ ಸಂಖ್ಯೆ ಹಠಾತ್ ಹೆಚ್ಚಳವಾಗಿದೆ ಎನ್ನಲಾಗುತ್ತಿದ್ದು ಎಲ್ಲ ರಾಜ್ಯಗಳ ಪ್ರಚಲಿತ ಸ್ಥಿತಿಯ ಕುರಿತ ವರದಿ ಬೇಕಾಗಿದೆ. ರಾಜ್ಯಗಳು ದಕ್ಷತೆಯಿಂದ ಕ್ರಮಕೈಗೊಳ್ಳದಿದ್ದರೆ ಡಿಸೆಂಬರಿನಲ್ಲಿ ಪರಿಸ್ಥಿತಿ ಹೆಚ್ಚು ಕೆಡಬಹುದೆಂದು ಸುಪ್ರೀಂ ಕೋರ್ಟು ಹೇಳಿದೆ.

ಕೋರ್ಟು ಈಗ ದಿಲ್ಲಿ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂನ ಪ್ರಚಲಿತ ಪರಿಸ್ಥಿತಿಯ ವರದಿಯನ್ನು ಕೇಳಿದೆ. ನವೆಂಬರ್ 27ಕ್ಕೆ ಪ್ರಕರಣದ ಪುನಃ ವಿಚಾರಣೆಗೆ ಬರಲಿದೆ. ದಿಲ್ಲಿಯ ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ಜಸ್ಟಿಸ್ ಅಶೋಕ್ ಭೂಷಣ್, ಜಸ್ಟಿಸ್ ಆರ್.ಸುಭಾಶ್ ರೆಡ್ಡಿ, ಜಸ್ಟಿಸ್ ಎಂಪಿ ಶಾರನ್ನೊಳಗೊಂಡ ಪೀಠ ಹೇಳಿದೆ.

ರಾಜ್ಯಗಳ ಪ್ರಚಲಿತ ಪರಿಸ್ಥಿತಿ ಹೇಗಿದೆ, ಯಾವೆಲ್ಲ ಕ್ರಮ ಅನುಸರಿಸಲಾಗುತ್ತಿದೆ ಎಂದು ದಿಲ್ಲಿ ಸರಕಾರಕ್ಕೆ ಸುಪ್ರೀಂಕೋರ್ಟು ಕೇಳಿತು. ಇದೇ ವೇಳೆ ಗೃಹ ಸಚಿವ ಅಮಿತ್ ಶಾರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಕೊಓನ ಪ್ರತಿರೋಧ ಕಾರ್ಯ ಕೈಗೊಂಡಿರುವುದನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿತು. ಆದರೆ, ದಿಲ್ಲಿ ಸರಕಾರ ಹಲವು ವಿಷಯಗಳಿಗೆ ಉತ್ತರ ನೀಡಬೇಕಾಗಿದೆ ಎಂದು ಕೋರ್ಟು ಹೇಳಿದೆ.

ದೇಶದಲ್ಲಿ ಕೊರೋನ ಬಿಗಡಾಯಿಸಿರುವ ಆರನೇ ಸ್ಥಾನದಲ್ಲಿರುವ ರಾಜ್ಯವಾಗಿದೆ ದಿಲ್ಲಿ. ಇಲ್ಲಿ 5.29 ಲಕ್ಷ ಮಂದಿಗೆ ಇದುವರೆಗೆ ಕೊರೋನ ದೃಢಪಟ್ಟಿದೆ. ಗುಜರಾತಿನ ಅಹ್ಮದಾಬಾದ್, ರಾಜ್‍ಕೋಟ್, ಸೂರತ್, ವಡೋದರಗಳಲ್ಲಿ ರಾತ್ರೆ ವೇಳೆ ಕೊರೋನ ಹೆಚ್ಚಳವಾಗಿರುವ ಕಾರಣದಿಂದ ಕರ್ಫ್ಯೂ ಘೋಷಿಸಲಾಗಿದೆ.