ಅನಿವಾಸಿಗಳಿಗೆ ಮತದಾನದ ಹಕ್ಕು: ಗಲ್ಫ್‌ ರಾಷ್ಟ್ರಗಳ ಭಾರತೀಯರಿಗಿಲ್ಲ ಅವಕಾಶ…!

0
596

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಜಾಪ್ರಭುತ್ವ ಇಲ್ಲದ ಗಲ್ಫ್ ರಾಷ್ಟ್ರಗಳನ್ನು ಹೊರತು ಪಡಿಸಿ, ಇತರ ವಿದೇಶಿ ಭಾರತೀಯರಿಗೆ ಇ-ಟಪಾಲು ಮತದಾನಕ್ಕೆ ಸೌಲಭ್ಯ ಮಾಡಿಕೊಡಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಮುಂದಿನ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಅನಿವಾಸಿ ಮತದಾರರಿಗೆ ಈ ರೀತಿಯಲ್ಲಿ ಮತದಾನ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಅನಿವಾಸಿ ಮತದಾನ ಹಕ್ಕಿಗಾಗಿ ಅತ್ಯಂತ ಹೆಚ್ಚು ಬೇಡಿಕೆಯ ಇದ್ದದ್ದು ಗಲ್ಫ್ ರಾಷ್ಟ್ರಗಳ ಅನಿವಾಸಿಗಳಿಂದಾಗಿತ್ತು. ಆದರೆ ಅವರಿಗೆ ಅವಕಾಶ ನೀಡಿಲ್ಲ.

ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಅನಿವಾಸಿಗಳಿಗೆ ಇಲೆಕ್ಟ್ರಾನಿಕ್ ಪೋಸ್ಟಲ್ ಮತ ಸಂಪ್ರದಾಯ ಆರಂಭಿಸಲು ಸಿದ್ಧ ಎಂದು ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ತಿಳಿಸಿತ್ತು.

ತದ ನಂತರ ವಿದೇಶ ಸಚಿವಾಲಯ ಚುನಾವಣಾ ಆಯೋಗದೊಂದಿಗೆ ನಡೆಸಿದ ಚರ್ಚೆಯಲ್ಲಿ ಹೊಸ ನಿರ್ದೇಶನ ಹೊರಡಿಸಲಾಗಿದ್ದು, ಪ್ರಜಾಪ್ರಭುತ್ವ ಇರುವ ಗಲ್ಫೇತರ ದೇಶಗಳಲ್ಲಿ ಮೊದಲ ಹಂತದಲ್ಲಿ ಇ-ಟಪಾಲು ಮತದಾನವನ್ನು ಪರೀಕ್ಷಿಸಿ ನೋಡಬಹುದು ಎಂದು ವಿದೇಶ ಸಚಿವಾಲಯ ಹೇಳಿದೆ.

ಇದು ಸರಿಯಾದರೆ ಗಲ್ಫ್ ನ ಮತದಾರರಿಗೂ ಭವಿಷ್ಯದಲ್ಲಿ ಟಪಾಲಿನ ಮೂಲಕ ವೋಟು ಹಾಕುವ ವ್ಯವಸ್ಥೆ ಏರ್ಪಡಿಸಲಾಗುವುದು ಎನ್ನಲಾಗಿದೆ. ಆದರೆ ಮೊದಲ ಹಂತದಲ್ಲಿ ಗಲ್ಫ್ ಮತದಾರರು ಟಪಾಲು ವೋಟಿಂಗ್ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಹಂತದಲ್ಲಿ ವೋಟು ಹಾಕಲು ಅವಕಾಶ ಸಿಗದಿದ್ದರೆ ಮುಂದೆಯೂ ಹೀಗೆಯೇ ಮುಂದುವರಿಯಬಹುದು ಎನ್ನಲಾಗುತ್ತಿದೆ.

ಅಮೆರಿಕ, ಕೆನಡಾ, ಫ್ರಾನ್ಸ್, ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್ ,ಜಪಾನ್, ಆಸ್ಟ್ರೇಲಿಯ, ಜರ್ಮನಿಯಲ್ಲಿರುವ ಅನಿವಾಸಿ ಭಾರತೀಯರಿಗೆ ಇ-ಟಪಾಲು ಮತದಾನ ಜಾರಿಗೆ ತರುವ ಅಭಿಪ್ರಾಯವನ್ನು ವಿದೇಶ ಸಚಿವಾಲಯ ಚುನಾವಣಾ ಆಯೋಗಕ್ಕೆ ನೀಡಿದೆ.