ಸನ್ಮಾರ್ಗ ವಾರ್ತೆ
ನೋಯ್ಡಾ: ಬಲವಂತದಿಂದ ಮತಾಂತರ ಮಾಡಿಸಲು ಯೋಜನೆ ರೂಪಿಸಿದ್ದಾರೆಂದು ಆರೋಪಿಸಿ ಕ್ರೈಸ್ತ ಮಿಷನರಿ ತಂಡವೊಂದನ್ನು ಉತ್ತರ ಪ್ರದೇಶದ ವಿವಾದಿತ ಮತಾಂತರ ವಿರೋಧಿ ಕಾನೂನಿನ ಪ್ರಕಾರ ಕೇಸು ದಾಖಲಿಸಿ ಬಂಧಿಸಲಾಗಿದೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಕಳೆದ ತಿಂಗಳು ಜಾರಿಗೆ ತಂದಿರುವ ವಿವಾದಾತ್ಮಕ ಮತಾಂತರ ತಡೆ ಕಾನೂನಿನ ಪ್ರಕಾರ ಕ್ರೈಸ್ತ ಮಿಷನರಿಗಳನ್ನು ಬಂಧಿಸಲಾಗಿದ್ದು, ದಕ್ಷಿಣ ಕೊರಿಯಾದ ಆನ್ಮೂಲ್ ಸಹಿತ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸೀಮಾ, ಸಂಧ್ಯ, ಉಮೇಶ್ ಕುಮಾರ್ ಆನ್ ಮೋಲ್ ಜೊತೆ ಬಂಧಿತರಾದವರು. ಇವರು ಅಲಹಾಬಾದಿನ ನಿವಾಸಿಗಳು.
ಉತ್ತರ ಪ್ರದೇಶದಲ್ಲಿ ಹೊಸ ಕಾನೂನಿನ ಪ್ರಕಾರ ಐದು ವರ್ಷದವರೆಗೆ ಜೈಲು ಶಿಕ್ಷೆ ಸಿಗುವ ಅಪರಾಧವೆಂದು ಪರಿಗಣಿಸಲಾಗಿರುವ ಬಲವಂತದ ಮತಾಂತರವು, ಈಗಾಗಲೇ ಹಲವಾರು ವಿವಾದಕ್ಕೆ ಕಾರಣವಾಗಿದೆ.
ಸದ್ಯ ಬಂಧಿತರ ವಿರುದ್ಧ ಈ ಕಾನೂನನ್ನು ಹೇರಲಾಗಿದ್ದು, ಉತ್ತರ ಪ್ರದೇಶ ಸರಕಾರ ಭಾರೀ ವಿರೋಧಗಳ ನಡುವೆ ಈ ಕಾನೂನು ಜಾರಿಗೆ ತಂದಿತ್ತು.












