ಸನ್ಮಾರ್ಗ ವಾರ್ತೆ
ಜೈಪುರ: ರಾಜಸ್ಥಾನದ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಭಾರೀ ಜಯಭೇರಿ ಮೊಳಗಿಸಿದೆ.
ಒಟ್ಟು 50ರಲ್ಲಿ 36ರ ಮುನ್ಸಿಪಾಲಿಟಿ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿ 12 ಸೀಟು ಗೆದ್ದಿದ್ದರೆ , ಇಬ್ಬರು ಪಕ್ಷೇತರರು ಗೆದ್ದಿದ್ದಾರೆ.
ಐದು ಜಿಲ್ಲೆಗಳ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಉಜ್ವಲ ಜಯ ಗಳಿಸಿತು. ಬಿಜೆಪಿಯನ್ನು 12 ಸೀಟುಗಳಿಗೆ ಮೊಟಕುಗೊಳಿಸಲು ಕಾಂಗ್ರೆಸ್ ಯಶಸ್ವಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ಅಭಿನಂದನೆ ಸಲ್ಲಿಸಿದರು.
ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು ದುರುಪಯೋಗಿಸಿ ಜಾತಿ, ಧರ್ಮದಿಂದ ಗೆದ್ದಿದೆ ಎಂದು ಬಿಜೆಪಿ ವಕ್ತಾರ ಮುಖೇಶ್ ಪರೀಕ್ ಹೇಳಿದರು. ವಿಜಯಿಗಳನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿನಂದಿಸಿದ್ದಾರೆ.












