ಪ.ಬಂಗಾಳದಲ್ಲಿ ಬಿಜೆಪಿ ಎರಡಂಕೆ ದಾಟುವುದಿಲ್ಲ: ತದ್ವಿರುದ್ಧವಾದರೆ ನಾನು ಟ್ವಿಟರ್ ಬಿಡುತ್ತೇನೆ; ಪ್ರಶಾಂತ್ ಕಿಶೋರ್

0
491

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮುಂಬರಲಿರುವ  ಪ.ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಎರಡಂಕ ದಾಟಲು ಕಷ್ಟಪಡುತ್ತಿದೆ ಎಂದು ಮಮತಾ ಬ್ಯಾನರ್ಜಿಯವರ ಚುನಾವಣಾ ಅಭಿಯಾನಕ್ಕೆ ನೇತೃತ್ವ ವಹಿಸುತ್ತಿರುವ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪ.ಬಂಗಾಳದಲ್ಲಿ ಬಿಜೆಪಿ ಭಾರೀ ಮುನ್ನಡೆ ಗಳಿಸುವ ಉದ್ದೇಶದಿಂದ ಭರ್ಜರಿ ಪ್ರಚಾರ ಮಾಡುತ್ತಿದೆ ಅಷ್ಟೇ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಮಾಧ್ಯಮಗಳ ಸಹಾಯದಲ್ಲಿ ಬಿಜೆಪಿ ಹೈಪ್ ಉಂಟು ಮಾಡುತ್ತಿದೆ. ನಿಜವಾಗಿ ಬಿಜೆಪಿ ಎರಡಂಕೆ ದಾಟಲು ಕಷ್ಟಪಡುತ್ತಿದೆ. ಈ ಟ್ವೀಟ್ ಸೇವ್ ಮಾಡಿಡಿ. ಬಿಜೆಪಿ ದೊಡ್ಡ ಮಟ್ಟದ ಪ್ರದರ್ಶನ ತೋರಿದರೆ ನಾನು ಜಾಗ ಖಾಲಿ ಮಾಡುವೆ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮುನ್ನಡೆ ಗಳಿಸಿದ ಬಿಜೆಪಿ, ಅಮಿತ್ ಶಾರ ನೇತೃತ್ವದಲ್ಲಿ ಪ.ಬಂಗಾಳದಲ್ಲಿ ದೊಡ್ಡ ಮಟ್ಟದ ಪ್ರಚಾರ ನಡೆಸುತ್ತಿದೆ. ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಬಂದ ಬೆನ್ನಿಗೆ ತೃಣಮೂಲ ಕಾಂಗ್ರೆಸ್ , ಸಿಪಿಎಂ, ಸಂಸದರು ಬಿಜೆಪಿಗೆ ಸೇರ್ಪಡೆಯಾಗಿದ್ದರು.