ತಮಿಳ್ನಾಡು: ಜಲ್ಲಿಕಟ್ಟಿಗೆ ಸರಕಾರದಿಂದ ಅನುಮತಿ; ಕೊರೋನ ಮಾರ್ಗಸೂಚಿ ಬಿಡುಗಡೆ

0
462

ಸನ್ಮಾರ್ಗ ವಾರ್ತೆ

ಚೆನ್ನೈ,ಡಿ.23: ಕೊರೋನ ಹರಡುವ ನಿಟ್ಟಿನಲ್ಲಿ ತಮಿಳ್ನಾಡಿನಲ್ಲಿ ನಿಯಂತ್ರಣಗಳೊಂದಿಗೆ ಜಲ್ಲಿಕಟ್ಟು ನಡೆಸಲು ತಮಿಳ್ನಾಡು ಸರಕಾರ ಅನುಮತಿ ನೀಡಿದೆ. ಜೆಲ್ಲಿಕಟ್ಟು ನಡೆಸುವುದಕ್ಕೆ ತಮಿಳ್ನಾಡು ಸರಕಾರ ಮಾರ್ಗಸೂಚಿ ಹೊರಡಿಸಿದೆ.

ಕಾರ್ಯಕ್ರಮದಲ್ಲಿ 300ಕ್ಕಿಂತ ಹೆಚ್ಚು ಮಂದಿಗೆ ಪ್ರವೇಶ ಕೊಡಬಾರದು. ಮಾಟ್ಟು ಪೊಂಗಲ್ ವೇಳೆ ತಮಿಳ್ನಾಡಿನಲ್ಲಿ ಜಲ್ಲಿಕಟ್ಟು ನಡೆಯುತ್ತಿದ್ದು ಶೇ.50ರಷ್ಟು ನೋಡುಗರಿಗೆ ಮಾತ್ರ ಪ್ರವೇಶ ನೀಡಬೇಕು. ಜಲ್ಲಿಕಟ್ಟಿನಲ್ಲಿ ಭಾಗವಹಿಸುವವರ ಉಷ್ಣತೆ ಪರೀಕ್ಷಿಸಿದ ಬಳಿಕ ಮಾತ್ರ ಪ್ರವೇಶ ನೀಡಬೇಕು.

ಜಲ್ಲಿಕಟ್ಟಿನಲ್ಲಿ ಭಾಗವಹಿಸುವವರಿಗೆ ಸರಕಾರದ ಲ್ಯಾಬ್‍ನಿಂದ ಪಡೆದ ಕೊರೋನ ನೆಗೆಟಿವ್ ಸರ್ಟಿಫಿಕೆಟ್ ಇರಬೇಕು. ಜಲ್ಲಿಕಟ್ಟಿಗೆ ನೋಡಲು ಬರುವವರು ಮಾಸ್ಕನ್ನು ಕಡ್ಡಾಯವಾಗಿ ಹಾಕಿಕೊಂಡಿರಬೇಕು. ಸಾಮಾಜಿಕ ಅಂತರವನ್ನು ಪಾಲಿಸಬೇಕೆಂದು ಸರಕಾರ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.