ದ್ವೇಷದ ಹೇಳಿಕೆ: ರಿಪಬ್ಲಿಕ್ ಟಿವಿಗೆ ಇಂಗ್ಲೆಂಡ್‌ನಲ್ಲಿ 20 ಲಕ್ಷ ರೂ. ದಂಡ

0
290

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.23: ರಿಪಬ್ಲಿಕ್ ಟಿವಿ ಮಾಲಕ ಅರ್ನಬ್ ಗೋಸ್ವಾಮಿಯ ಹಿಂದಿ ವಾರ್ತಾ ಚ್ಯಾನೆಲ್ ರಿಪಬ್ಲಿಕ್ ಭಾರತ್‍ಗೆ ಇಂಗ್ಲೆಂಡಿನಲ್ಲಿ 20,000 ಪೌಂಡ್(ಭಾರತದ ರೂ.20 ಲಕ್ಷ) ದಂಡವಿಧಿಸಲಾಗಿದೆ. ಪಾಕಿಸ್ತಾನಿನ ಜನರ ವಿರುದ್ಧ ದ್ವೇಷಪೂರಿತ ಹೇಳಿಕೆಗಾಗಿ ಮಂಗಳವಾರ ಇಂಗ್ಲೆಂಡ್ ಬ್ರಾಡ್ ಕಾಸ್ಟಿಂಗ್ ರೆಗುಲೇಟರ್ ಆಫ್‍ಕೋಂ ರಿಪಬ್ಲಿಕ್ ಭಾರತಕ್ಕೆ ದಂಡ ವಿಧಿಸಿದೆ.

2019 ಸೆಪ್ಟಂಬರ್ 6ರಂದು ಗೋಸ್ವಾಮಿಯವರ ಪೂಛಾ ಹೆ ಭಾರತ್ ಎಂಬ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ್ದು ಕಂಡು ಬಂದಿದೆ. ಪಾಕಿಸ್ತಾನದ ಜನರ ವಿರುದ್ಧ ನಿರಂತ ದ್ವೇಷ ಪಚಾರ ಮಾಡಿದ್ದು ಪತ್ತೆಯಾಗಿದೆ. ಕಾರ್ಯಕ್ರಮದ ಮುಂದಿನ ಪ್ರಸಾರಕ್ಕೆ ಆಫ್‍ಕೋಂ ನಿಷೇಧ ಹೇರಿದೆ.

2019 ಜುಲೈಯಲ್ಲಿ ಭಾರತ ಚಂದ್ರಯಾನ್ ಮಾಡಿದ್ದು ಪೂಛಾ ಹೇ ಭಾರತ್ ಚರ್ಚೆಗೆ ಆಧಾರವಾಗಿತ್ತು. ಮೂವರು ಭಾರತದ ಅತಿಥಿಗಳು ಮತ್ತು ಮೂವರು ಪಾಕಿಸ್ತಾನದ ಅತಿಥಿಗಳು ಅರ್ನಾಬ್ ಗೋಸ್ವಾಮಿ ಏಂಕರ್ ಆಗಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಪಾಕಿಸ್ತಾನದ ಜನರನ್ನು ಭಯೋತ್ಪಾದಕರಿಗೆ ಹೋಲಿಸಲಾಗಿತ್ತು.