ಸನ್ಮಾರ್ಗ ವಾರ್ತೆ
ಕೊಲ್ಕತಾ,ಡಿ.23: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯು ನಿಕಟವಾಗುತ್ತಿದ್ದಂತೆ ಹೆಚ್ಚಿನ ನಾಯಕರು ಬಿಜೆಪಿಗೆ ವಲಸೆ ಹೊರಟಿದ್ದಾರೆ. ಕಳೆದ ದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆದ ನಿರ್ಣಾಯಕ ಸಚಿವ ಸಂಪುಟ ಸಭೆಯಲ್ಲಿ ನಾಲ್ವರು ಸಚಿವರು ಭಾಗವಹಿಸಿಲ್ಲ. ಸಚಿವರ ಅನುಪಸ್ಥಿತಿ ತೃಣಮೂಲ ಕಾಂಗ್ರೆಸ್‍ನಲ್ಲಿ ತೀವ್ರ ಮನಸ್ತಾಪದ ಸೂಚನೆಯನ್ನು ನೀಡುತ್ತಿದೆ. ಅಮಿತ್ ಶಾರ ನೇತೃತ್ವದಲ್ಲಿ ಹೆಚ್ಚಿನ ತೃಣಮೂಲ ನಾಯಕರು ಬಿಜೆಪಿಯ ಪಾಳಯಕ್ಕೆ ಹಾರಲು ಚರ್ಚೆ ನಡೆಸುತ್ತಿದ್ದಾರೆ ಎಂದು ವಿವರ ಲಭಿಸಿದೆ.
ರಾಜೀಬ್ ಬ್ಯಾನರ್ಜಿ, ರವೀಂದ್ರನಾಥ್ ಘೋಷ್, ಗೌತಂ ದೇಬ್, ಚಂದ್ರನಾಥ್ ಸಿನ್ಹಾ ಸಚಿವ ಸಂಪುಟ ಸಭೆಯಿಂದ ದೂರವುಳಿದಿದ್ದರು. ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮೂವರು ಸಚಿವರು ಮೊದಲೇ ತಿಳಿಸಿದ್ದರೆಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ತಿಳಿಸಿದ್ದಾರೆ. ಆದರೆ ಅರಣ್ಯ ಸಚಿವ ರಾಜೀಬ್ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸದ್ದಕ್ಕೆ ಕಾರಣ ತಿಳಿಸಿರಲಿಲ್ಲ. ತೃಣಮೂಲದ ಸರ್ವಾಧಿಕಾರಿ ಧೋರಣೆಯ ವಿರುದ್ಧ ರಜೀಬ್ ಬ್ಯಾನರ್ಜಿ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ಪಾರ್ಥ ಚಟರ್ಜಿಯೊಂದಿಗೆ ರಜೀಬ್ ಚಟರ್ಜಿ ಒಂದು ವಾರದಲ್ಲಿ ಎರಡು ಬಾರಿ ಭೇಟಿಯಾಗಿ ಚರ್ಚಿಸಿದ್ದರು.
ಇಬ್ಬರು ಪರಸ್ಪರ ಸಮಾಲೋಚನೆಯ ಬಳಿಕ ತೃಣಮೂಲ ತೊರೆದು ಬಿಜೆಪಿ ಪಾಳಯಕ್ಕೆ ಹೋದ ಸುವೇಂದು ಅಧಿಕಾರಿಯೊಂದಿಗೆ ತಮ್ಮನ್ನು ಹೋಲಿಸಬಾರದೆಂದು ರಜೀಬ್ ಬ್ಯಾನರ್ಜಿ ಹೇಳಿದ್ದರು. ಇದೇವೇಳೇ, ಸುವೇಂದ್‍ರ ಬೆನ್ನಿಗೆ ರಜೀಬ್‍ರು ಬಿಜೆಪಿಗೆ ಸೇರುವಂತೆ ಮಾಡಲು ಯತ್ನ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯ ಉದ್ದೇಶದಿಂದ ಅಮಿತ್ ಶಾರ ಪ್ರಯತ್ನ ನಡೆಯುತ್ತಿದ್ದು ಚುನಾವಣೆ ಮುಗಿಯುವವರೆಗೆ ಅಮಿತ್ ಶಾ ಪಶ್ಚಿಮಬಂಗಾಳಕ್ಕೆ ಖಾಯಂ ಸಂದರ್ಶಕರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
2019ರ ಲೋಕಸಭಾ ಚುನಾವಣೆಯ ಬಳಿಕ ತೃಣಮೂಲ ಕಾಂಗ್ರೆಸ್‍ನಿಂದ ದೊಡ್ಡ ಮಟ್ಟದ ಪಕ್ಷಾಂತರ ನಡೆಯುತ್ತಿದೆ. ಈ ಸಮಯದಲ್ಲಿ ತೃಣಮೂಲದ ಸುವೇಂದು ಅಧಿಕಾರಿ ಸಹಿತ ಸಂಸದರು ಶಾಸಕರ ಸಹಿತ 15 ಮಂದಿ ಬಿಜೆಪಿ ಪಾಳಯಕ್ಕೆ ಬಂದಿದ್ದು ಇದಲ್ಲದೆ ಅಮಿತ್ ಶಾರ ಭೇಟಿಯ ವೇಳೆ 20ಕ್ಕೂ ಹೆಚ್ಚು ಪ್ರಾದೇಶಿಕ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದೇ ವೇಳೆ ಚುನಾವಣೆಯನ್ನು ಎದುರಿಸಲು ತೃಣಮೂಲ ಕಾಂಗ್ರೆಸ್ ಕೂಡ ಯುದ್ಧ ರೀತಿಯ ಸಿದ್ಧತೆಯಲ್ಲಿದೆ. ಇತ್ತೀಚೆಗೆ ಬಿಜೆಪಿಯ ಯುವಮೋರ್ಚ ರಾಷ್ಟ್ರೀಯ ಅಧ್ಯಕ್ಷ ಬಿಷ್ಣುಪುರ ಸಂಸದ ಸೌಮಿತ್ರ ಖಾನ್‍ರ ಪತ್ನಿ ಸುಜಾತಾ ಮೊಂಡಲ್ ಖಾನ್ ತೃಣಮೂಲ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಇವರ ಕೆಲಸ ಹೆಚ್ಚು ಗಮನಸೆಳೆದಿತ್ತು. ಸೌಮಿತ್ರ ಖಾನ್‍ರ ವಿಜಯದಲ್ಲಿ ಪ್ರಧಾನ ಪಾತ್ರ ವಹಿಸಿದ ವ್ಯಕ್ತಿ ಸುಜಾತ ಆಗಿದ್ದರು. ಇದಲ್ಲದೆ ಬಿಲ್ ಗುರುಂಗ್‍ರ ಗೂರ್ಖ ಜನಮುಕ್ತಿ ಮೋಚಾ ಮಮತಾರಿಗೆ ಬೆಂಬಲ ಘೋಷಿಸಿದೆ. ಒಂದು ದಶದಕಕ್ಕಿಂತ ಹೆಚ್ಚು ಸಮಯದಲ್ಲಿ ಇದು ಎನ್‍ಡಿಎಯ ಸಖ್ಯವಾಗಿತ್ತು.












