ಮೋದಿಯ ವಿರುದ್ಧ ಮೋಹನ್ ಭಾಗವತ್ ಮಾತಾಡಿದರೂ ಭಯೋತ್ಪಾದಕರಾಗಬಹುದು- ರಾಹುಲ್ ಗಾಂಧಿ

0
488

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.24: ಕೃಷಿ ಕಾನೂನಿ ವಿರುದ್ಧ ಪ್ರತಿಭಟಿಸುವ ರೈತರೊಂದಿಗೆ ಕೇಂದ್ರ ಸರಕಾರದ ನಿಲುವಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲವೆಂದ ಅವರು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್‍‌ರವರೇ ಪ್ರಧಾನಿಯ ವಿರುದ್ಧ ಮಾತಾಡಿದರೆ ಅವರೂ ಭಯೋತ್ಪಾದಕರಾಗುವರು ಎಂದು ರಾಹುಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೇಟ್‍ಗಳಿಗೆ ಹಣ ಮಾಡಿಕೊಡುತ್ತಿದ್ದಾರೆ. ಅವರ ವಿರುದ್ಧ ಯಾರೇ ಮಾತಾಡಿದರೂ ಅವರು ಭಯೋತ್ಪಾದಕರಾಗುವರು. ಅದು ರೈತರಾದರೂ ಕಾರ್ಮಿಕರಾದರೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರೇ ಆದರೂ ಕೂಡ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶದಲ್ಲಿ ಈಗ ಪ್ರಜಾಪ್ರಭುತ್ವವಿಲ್ಲ. ಪ್ರಜಾಪ್ರಭುತ್ವ ಇದೆ ಎಂದು ಯಾರಾದರೂ ಭಾವಿಸಿದರೆ ಅದು ನಿಮ್ಮ ಚಿಂತನೆಗಳಲ್ಲಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ರೈತ ಕಾನೂನು ಚರ್ಚಿಸಲು ಪಾರ್ಲಿಮೆಂಟಿನ ಉಭಯ ಸದನಗಳ ಸಭೆಯನ್ನು ಕರೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.