ಚರ್ಚೆಗೆ ಸಿದ್ಧ ಎಂದು ಸುಳ್ಳು ಹೇಳಿ ಆಟ ಆಡಿಸುವುದನ್ನು ಬಿಡಿ: ಕೇಂದ್ರ ಸರಕಾರವನ್ನು ಎಚ್ಚರಿಸಿದ ರೈತರು

0
665

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ. 24: ಚರ್ಚೆಗೆ ಸಿದ್ಧ ಎಂದು ಸುಳ್ಳು ಹೇಳಿ ಕೇಂದ್ರ ಸರಕಾರ ಇನ್ನೂ ಆಟ ಆಡಿಸುವುದು ಬೇಡ ಎಂದು ರೈತ ನಾಯಕರು ಕೇಂದ್ರ ಸರಕಾರಕ್ಕೆ ಹೇಳಿದ್ದಾರೆ. ಮುಂದಿನ ಚರ್ಚೆಗೆ ಕೇಂದ್ರ ಸರಕಾರ ಕಳುಹಿಸಿದ ಕೊನೆಯ ಪತ್ರಕ್ಕೆ ಉತ್ತರ ಕೂಡ ನೀಡುವುದು ಬೇಡ ಎಂದು ರೈತ ನಾಯಕರು ತೀರ್ಮಾನಿಸಿದ್ದಾರೆ. ಸುಪ್ರೀಂ ಕೋರ್ಟಿನ ಸಾಲಿಸಿಟರ್ ಜನರಲ್‍ನೊಂದಿಗೆ ಹೇಳಿದ್ದೇ ಸರಕಾರಕ್ಕೂ ಹೇಳುವುದು. ವಿವಾದ ಕಾನೂನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ ಬಳಿಕವೇ ಇನ್ನು ಚರ್ಚೆ ಎಂದು ಸಿಂಘು ಗಡಿಯಲ್ಲಿ ರೈತರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಇದೇವೇಳೆ, ರೈತರಿಗೆ ಉತ್ತರವಾಗಿ 25ಕ್ಕೆ ಒಂಬತ್ತು ಕೋಟಿ ರೈತರೊಂದಿಗೆ ಮೋದಿ ಮಾತಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿದೆ. ಮುಂದಿನ ಚರ್ಚೆಗೆ ತಾರೀಕು ಹೇಳಲು ಕೇಂದ್ರ ಕೃಷಿ ಜಂಟಿ ಕಾರ್ಯದರ್ಶಿ ಪತ್ರ ಬರೆದಿದ್ದು ಎಲ್ಲ ರೈತ ಸಂಘಟನೆಗಳ ಪ್ರತಿನಿಧಿಗಳು ಎರಡು ದಿವಸ ವಿಶದವಾಗಿ ಚರ್ಚಿಸಿ ಉತ್ತರ ಕಳುಹಿಸಬೇಕೆಂದು ತೀರ್ಮಾನಿಸಿದ್ದರು.

ಬಹಳ ದಿನಗಳಿಂದ ಕೇಂದ್ರ ಆಟ ಆಡಿಸುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ನಾಯಕ ಹನ್ನನ್ ಮೊಲ್ಲ ಹೇಳಿದರು. ಚಳಿ ಹೆಚ್ಚುವಾಗ ರೈತರು ಹೊರಟು ಹೋಗಬಹುದೆಂದು ಈ ಆಟ ಆಡಿಸಲಾಗುತ್ತಿದೆ. ಇಂತಹ ತಪ್ಪು ಕಲ್ಪನೆಗಳನ್ನೆಲ್ಲ ಸರಕಾರ ಇಟ್ಟುಕೊಳ್ಳುವುದು ಬೇಡ ಎಂದು ಹನ್ನನ್ ಮೊಲ್ಲ ಹೇಳಿದರು. ಯಾವುದೇ ರೈತ ಸಂಘಟನೆಯೊಂದಿಗೆ ಸಂಬಂಧ ಇಲ್ಲದವರನ್ನು ರೈತರೆಂದು ಕರೆದು ಈ ಆಂದೋಲನವನ್ನು ನಾಶಪಡಿಸಲು ಯತ್ನಿಸಲಾಗುತ್ತಿದೆ ಎಂದು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಾವು ತಿರಸ್ಕರಿಸಿದ ಅರ್ಥಶೂನ್ಯವಾದ ತಿದ್ದುಪಡಿಗಳ ಕುರಿತು ಇನ್ನೂ ಮಾತಾಡುವುದಿಲ್ಲ. ತಿದ್ದುಪಡಿ ಬೇಡ ಎಂದು ರೈತರು ಒಕ್ಕೊರಲಿನಿಂದ ತೀರ್ಮಾನಿಸಿದ್ದೇವೆ. ಅದೇ ವಿಷಯದಲ್ಲಿ ಪತ್ರ ಬರೆದು ಚರ್ಚೆಗೆ ಕರೆಯುತ್ತಿರುವುದು ರೈತರ ಅವಹೇಳನವಾಗಿದೆ ಎಂದು ಅವರು ಹೇಳಿದರು‌.