ಭಯೋತ್ಪಾದಕರೊಂದಿಗೆ ಸಂಬಂಧ ಆರೋಪ: ನಾಲ್ವರ ಬಂಧನ

0
366

ಸನ್ಮಾರ್ಗ ವಾರ್ತೆ

ಅವಂತಿಪೊರ,ಡಿ. 24: ಜಮ್ಮು ಕಾಶ್ಮೀರದ ಅಲ್‍ ಬದ್ರ್ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅವಂತಿಪೊರದ ದದ್‍ಸಾರ ಗ್ರಾಮದಲ್ಲಿ ಸೇನೆ ನಡೆಸಿದ ಶೋಧದ ವೇಳೆ ಇವರನ್ನು ಬಂಧಿಸಲಾಗಿದೆ.

ಬಂಧನಕ್ಕೊಳಗಾದವರಿಂದ ಎಕೆ 56 ರೈಫಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗ್ರೇನೆಡ್ ಸಹಿತ ವಸ್ತುಗಳು ಪತ್ತೆಯಾಗಿವೆ. ಬಂಧಿತರ ವಿರುದ್ಧ ಅವಂತಿಪೊರ ಪೊಲೀಸರು ಕೇಸು ದಾಖಲಿಸಿದ್ದಾರೆ.

ರಹಸ್ಯ ಮಾಹಿತಿಯ ಆಧಾರದಲ್ಲಿ ದದ್ಸರ- ಲರ್‍ಮೋಹ್ ಗ್ರಾಮಗಳಲ್ಲಿ ಸೇನೆ ಶೋಧಕಾರ್ಯ ನಡೆಸಿತ್ತು. ಶಂಕಾಸ್ಪದವಾಗಿ ಕಂಡು ಬಂದವರನ್ನು ಪ್ರಶ್ನಿಸಿದಾಗ ಇವರಿಗೆ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಇದೆ ಎಂಬುದು ತಿಳಿದು ಬಂದಿತ್ತು.