ಸನ್ಮಾರ್ಗ ವಾರ್ತೆ
ಪುಣೆ: ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್‍ರ ಪತ್ನಿ ವರ್ಷ ರಾವತ್‍ರಿಗೆ ಇಡಿ ನೋಟಿಸ್ ಜಾರಿ ಮಾಡಿದೆ.
ಮುಂಬೈಯ ಇಡಿ ಕಚೇರಿಗೆ ನಾಳೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಈ ಹಿಂದೆ ಎರಡು ಸಲ ಇಡಿ ನೋಟಿಸು ಜಾರಿ ಮಾಡಲಾಗಿತ್ತು. ಆದರೆ ವರ್ಷ ರಾವತ್ ಹಾಜರಾಗಿರಲಿಲ್ಲ.
ಪಂಜಾಬ್ ಆಂಡ್ ಮಹಾರಾಷ್ಟ್ರ ಕೋ-ಆಪರೇಟಿವ್(ಪಿಎಂಸಿ) ಬ್ಯಾಂಕಿನ 4,355 ಕೋಟಿ ವಂಚನೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್‍ರ ನಿಕಟವರ್ತಿ ಪ್ರವೀಣ್ ರಾವತ್‍ರ ಪತ್ನಿ ಮಾಧುರಿ ಮತ್ತು ವರ್ಷ ತಮ್ಮೊಳಗೆ 55 ಲಕ್ಷ ರೂಪಾಯಿ ಹಸ್ತಾಂತರಿಸಿಕೊಂಡಿದ್ದಾರೆ ಎಂದು ಎನ್‍ಫೋಸ್‍ಮೆಂಟ್ ಡೈರಕ್ಟರೇಟ್(ಇಡಿ) ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ವಂಚನೆ ಪ್ರಕರಣದಲ್ಲಿ ವರ್ಷಾ ರಾವತ್ ರ ಹೆಸರು ಪ್ರಕರಣದಲ್ಲಿರುವುದಾಗಿ ವರದಿಯಾಗಿದೆ.












