ಬೀದರ್ ನಲ್ಲಿ GIO ದಿಂದ ಎಕ್ಸ್ ಪೋ -2020 ವಸ್ತು ಪ್ರದರ್ಶನ

0
484

ಸನ್ಮಾರ್ಗ ವಾರ್ತೆ

ಬೀದರ್: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಬೀದರ್ ವತಿಯಿಂದ ಎಕ್ಸ್ ಪೋ 2020 ಕಾರ್ಯಕ್ರಮವು ಬೀದರ್ ನಗರದಲ್ಲಿ ಆಯೋಜಿಸಲಾಗಿತ್ತು.

‘ಕತ್ತಲೆಯ ಜಗತ್ತನ್ನು ಬೆಳಗಿಸಿ'(brighten a drak world) ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಈ ವಸ್ತು ಪ್ರದರ್ಶನದಲ್ಲಿ ಸುಮಾರು 35 ಕ್ಕೂ ಹೆಚ್ಚು ಪ್ರೊಜೆಕ್ಟ್ ಗಳನ್ನು ಪ್ರದರ್ಶನ ಮಾಡಿ, ಜಿ.ಐ.ಓ. ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಸಮಾಜದಲ್ಲಿನ ಸಾಮಾಜಿಕ ದುಷ್ಕೃತ್ಯಗಳನ್ನು ಅರಿತುಕೊಳ್ಳುವುದು ಮತ್ತು ಇಸ್ಲಾಂ ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯನ್ನು ಸಾರ್ವಜನಿಕರಿಂದ ದೂರ ಮಾಡುವ ಉದ್ದೇಶದಿಂದ ಈ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಯಿತು ಎಂದು ಜಿಐಓನ ಹೊಣೆಗಾರರು ತಿಳಿಸಿದ್ದಾರೆ.

ವಸ್ತು ಪ್ರದರ್ಶನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಆಸಿಫುದ್ದೀನ್ ಸಾಹೇಬ್, ಬೀದರ್ ಜಿಲ್ಲೆಯ ಅಧ್ಯಕ್ಷ ಅಕ್ರಂ ಅಲಿ ಸಾಹೇಬ್, ಬೀದರ್ ನಗರಾಧ್ಯಕ್ಷ ನಿಝಾಮುದ್ದೀನ್ ಸೇರಿದಂತೆ ಮತ್ತಿತರರು ಭೇಟಿ ನೀಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.