ಮಕ್ಕಳ ನಗ್ನ ಚಿತ್ರ ಪ್ರಚಾರ ಪ್ರಕರಣ: ವೈದ್ಯನ ಸಹಿತ 41 ಮಂದಿ ಬಂಧನ

0
822

ಸನ್ಮಾರ್ಗ ವಾರ್ತೆ

ತಿರುವನಂತಪುರಂ: ಮಕ್ಕಳ ನಗ್ನ ಚಿತ್ರ ಪ್ರಚಾರ ಪ್ರಕರಣದಲ್ಲಿ 41 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದು ಇವರಲ್ಲಿ ಒಬ್ಬ ವೈದ್ಯ, ಒಬ್ಬ ಪೊಲೀಸ್ ಟ್ರೈನಿ ಮತ್ತು ಐಟಿ ಉದ್ಯೋಗಸ್ಥರೂ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್ ಪೊಲೀಸ್ ನಡೆಸಿದ ದಾಳಿಯಲ್ಲಿ 339 ಪ್ರಕರಣಗಳು ನೋಂದಾವಣೆಯಾಗಿದೆ. ಮೊಬೈಲ್ ಫೋನ್ ಸಹಿತ 392 ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ವರ್ಷ ಇದಕ್ಕೆ ಸಂಬಂಧಿಸಿದಂತಗೆ ಮೂರನೇ ದಾಳಿ ನಡೆದಿದೆ. ಪೊಲೀಸರು ಆಪರೇಷನ್ ಹಂಟ್ ಹೆಸರಿನಲ್ಲಿ ದಾಳಿ ನಡೆಸಿದ್ದರು.

ಪೋಕ್ಸೊ ಪ್ರಕರಣದಡಿಯಲ್ಲಿ 339 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಆರರಿಂದ ಹದಿನೈದು ವರ್ಷದವರೆಗಿನ ಮಕ್ಕಳ ನಗ್ನ ಚಿತ್ರ, ಅಶ್ಲೀಲ ವೀಡಿಯೊ ಪ್ರಚಾರ ಮಾಡುತ್ತಿದ್ದ ತಂಡದ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿದ್ದವು. ಮಕ್ಕಳ ಅಶ್ಲೀಲ ಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರಚಾರ ಪಡಿಸುವುದು ಸೈಬರ್ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು. ಇಂಟರ್ ಫೋಲ್ ಸಹಾಯದಿಂದ ಕೇರಳ ಪೊಲೀಸರು ಆಪರೇಷನ್ ಹಂಟ್ ನಡೆಸಿದ್ದು ಎರಡು ವರ್ಷದಲ್ಲಿ 525 ಪ್ರಕರಣಗಳು ದಾಖಲಾಗಿವೆ.