ಲಾಕ್‌ಡೌನ್ ಶುಲ್ಕ ಬಾಕಿ: ಆನ್‍ಲೈನ್ ಕ್ಲಾಸಿನಿಂದ ವಿದ್ಯಾರ್ಥಿಗಳನ್ನು ಹೊರಗಿಟ್ಟ ಖಾಸಗಿ ಶಾಲೆ; ಹೆತ್ತವರು-ಶಿಕ್ಷಣ ಸಂಸ್ಥೆಯ ನಡುವೆ ತೀವ್ರಗೊಂಡ ವಿವಾದ

0
700

ಸನ್ಮಾರ್ಗ ವಾರ್ತೆ

ಕೇರಳ: ಲಾಕ್‍ಡೌನ್ ಕಾಲದ ಶುಲ್ಕ ರಿಯಾಯತಿ ಕುರಿತು ಖಾಸಗಿ ಶಾಲೆ ಮತ್ತು ಹೆತ್ತವರ ನಡುವೆ ವಿವಾದ ತೀವ್ರವಾಗಿದೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಆನ್‍ಲೈನ್ ಕ್ಲಾಸ್‍ನಿಂದ ಹೊರಗಿಟ್ಟಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಲಾಕ್‍ಡೌನ್ ಕಾಲದ ಶುಲ್ಕ ಶೇ.50ರಷ್ಟು ವಿನಾಯಿತಿ ನೀಡಬೇಕೆಂದು ಹೆತ್ತವರ ಬೇಡಿಕೆಯನ್ನು ನಿರ್ಮಲಾ ಮಾತಾ ಸ್ಕೂಲ್ ಮ್ಯಾನೇಜ್‍ಮೆಂಟ್ ನಿರಾಕರಿಸಿದ್ದರಿಂದ ಪ್ರತಿಭಟನೆ ವ್ಯಕ್ತವಾಗಿದ್ದು ಮಕ್ಕಳ ಟಿಸಿ ಕೇಳಲು ಸೋಮವಾರ ಹೆತ್ತವರ ವಿಭಾಗ ಬಂದಿತ್ತು. ಇದೇವೇಳೆ ಶಾಲಾಧಿಕಾರಿಗಳು ಮತ್ತು ಹೆತ್ತವರ ನಡುವೆ ವಿವಾದ ಸೃಷ್ಟಿಯಾಯಿತು. ನಂತರ ಪೊಲೀಸರು ಬಂದು ಹೇಳಿದರೂ ಮ್ಯಾನೇಜ್ಮೆಂಟ್ ಹೆತ್ತವತ ಬೇಡಿಕೆಗೆ ಮಣಿಯಲಿಲ್ಲ.

ಶುಲ್ಕದ ಜೊತೆಗೆ ಪಿಟಿಎ ಫಂಡ್ ಮತ್ತು ಇತರ ಫಂಡ್‍ಗಳನ್ನು ಸೇರಿಸಿ ಲಾಕ್‍ಡೌನ್ ಕಾಲದ ಮೊದಲ ಹಂತದ ಆನ್‍ಲೈನ್ ಕಲಿಕೆಗೆ ಈಡುಮಾಡಲಾಗಿದೆ. ಈ ಸಮಯದಲ್ಲಿ ಶಾಲೆಯ ಸಿಬ್ಬಂದಿಗಳಿಗೆ ಅರ್ಧ ಸಂಬಳ ಕೊಡಲಾಗಿದೆ. ಆದರೂ ಮಕ್ಕಳ ಶುಲ್ಕದಲ್ಲಿ ವಿನಾಯಿತಿ ಇಲ್ಲ. ಮೊದಲ ಹಂತದ ಶುಲ್ಕ ತೆರಲು ಹೆಚ್ಚಿನ ಹೆತ್ತವರು ತಯಾರಾಗಿಲ್ಲ. 200ರಷ್ಟು ಹೆತ್ತವರು ವಾಟ್ಸಪ್ ಗ್ರೂಪ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.

ಡೊನೇಶನ್ ಕೊಟ್ಟು ಅಡ್ಮಿಶನ್ ಪಡೆದುಕೊಂಡಿದ್ದೇವೆ. ಟಿಸಿಯ ಜೊತೆ ಡೊನೇಶನ್ ಮೊತ್ತವನ್ನು ಮರಳಿ ಕೊಡಬೇಕೆಂದು ಹೆತ್ತವರು ಆಗ್ರಹಿಸುತ್ತಿದ್ದಾರೆ. ಆದರೆ ಇದನ್ನು ಶಾಲಾಡಳಿತ ಮಂಡಳಿ ನಿರಾಕರಿಸಿದೆ. ಶಾಲೆ ಪ್ರವೇಶದ ವೇಳೆ ಡೊನೇಶನ್ ಪಡೆದುಕೊಂಡಿಲ್ಲ. ಶುಲ್ಕದಲ್ಲಿಯೇ ದೊಡ್ಡ ಮಟ್ಟದ ವಿನಾಯಿತಿ ನೀಡಲಾಗಿದೆ ಎನ್ನುತ್ತಿದ್ದಾರೆ. ಆನ್‍ಲೈನ್ ಕ್ಲಾಸ್ ಇದ್ದುದರಿಂದ ಅಧ್ಯಾಪಕರಿಗೆ ಸಂಬಳ ಕೊಡಬೇಕಾಗುತ್ತದೆ. ದೊಡ್ಡ ಆರ್ಥಿಕ ವೆಚ್ಚ ತಗಲಿದೆ. ಶೇ.25ರಷ್ಟು ವಿನಾಯತಿ ಕೊಟ್ಟು ಸಾಮಾನ್ಯ ಶುಲ್ಕವನ್ನು ಈಡುಗೊಳಿಸುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಆನ್‍ಲೈನ್ ಕ್ಲಾಸಿನಿಂದ ಹೊರಗಿಟ್ಟಿರುವ ಮಕ್ಕಳ ಕಲಿಕೆ ಮೊಟಕುಗೊಂಡಿದೆ ಎಂದು ಹೆತ್ತವರು ಆರೋಪಿಸಿದ್ದಾರೆ‌.