‘ಕಿಸಾನ್ ಪರೇಡ್’ ತಡೆಯಲು ಸುಪ್ರೀಮ್ ಕೋರ್ಟ್ ಮೊರೆ ಹೋದ ಕೇಂದ್ರ ಸರಕಾರ

0
496

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:ಪ್ರತಿಭಟನಾ ನಿರತ ರೈತರು ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ನಡೆಸಲು ನಿರ್ಧರಿಸಿದ ಕಿಸಾನ್ ಪರೇಡ್‌ನ್ನು ತಡೆಯಬೇಕೆಂದು ಆಗ್ರಹಿಸಿ ಕೇಂದ್ರ ಸರಕಾರ ಸೋಮವಾರ ಸಂಜೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ.

ವಾದ ಆಲಿಸುವ ವೇಳೆ ಹಿರಿಯ ವಕೀಲ ಹರೀಶ್ ಸಾಲ್ವೆ ಮುಂದಿಟ್ಟ ಈ ಬೇಡಿಕೆಯನ್ನು ಚೀಫ್ ಜಸ್ಟಿಸ್ ಬೊಬ್ಡೆ ಅಧ್ಯಕ್ಷತೆಯ ಪೀಠ ತಳ್ಳಿಹಾಕಿತ್ತು. ಜನವರಿ 26 ರಿಪಬ್ಲಿಕ್ ದಿನದಂದು ಕೋಲಾಹಲ ಹುಟ್ಟುಹಾಕಲು ರೈತರು ಟ್ರಾಕ್ಟರ್ ರ್ಯಾಲಿಗೆ ಹೊರಟಿದ್ದಾರೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಆರೋಪಿಸಿದ್ದಾರೆ. ರೈತ ಯೂನಿಯನ್ ಪರ ಹಾಜರಾದ ದುಷ್ಯಂತ್ ದವೆ ಆರೋಪವನ್ನು ನಿರಾಕರಿಸಿದ್ದಾರೆ.