ಹೊಸ ಕೃಷಿ ಕಾನೂನುಗಳನ್ನು ಸಮರ್ಥಿಸಿದ ರಾಷ್ಟ್ರಪತಿ: ಅಧಿವೇಶನದಿಂದ ಹೊರ ನಡೆದ ಪ್ರತಿಪಕ್ಷಗಳು

0
485

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.29: ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಪಾರ್ಲಿಮೆಂಟಿನ ಬಜೆಟ್ ಅಧಿವೇಶನವು ಆರಂಭವಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ರವರ ಭಾಷಣದೊಂದಿಗೆ ಅಧಿವೇಶನ ಆರಂಭವಾಯಿತು. ಆದರೆ, 19 ರಾಷ್ಟ್ರೀಯ ಪಾರ್ಟಿಗಳು ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿವೆ.

ಹೊಸ ಕೃಷಿ ಕಾನೂನುಗಳನ್ನು ನೀತಿ ಘೋಷಣೆಯ ಭಾಷಣದಲ್ಲಿ ಸೇರಿಸಿ ಸಮರ್ಥಿಸಿಕೊಂಡರು. ಈ ಕಾನೂನು ರೈತರಿಗೆ ಹೊಸ ಅವಕಾಶಗಳನ್ನು ನೀಡುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಈಗಿನ ಹಕ್ಕುಗಳನ್ನು ಹೊಸ ಕಾನೂನು ಇಲ್ಲದಾಗಿಸುವುದಿಲ್ಲ. ಗಣರಾಜ್ಯೋತ್ಸವ ದಿನದಲ್ಲಿ ಅಪಮಾನಕರ ಘಟನೆಗಳು ನಡೆದಿರುವುದು ದುರದೃಷ್ಟಕರ ಎಂದರು.

ಸವಾಲಿನ ನಡುವೆಯೂ ದೇಶ ಪ್ರಗತಿಯೆಡೆಗೆ ಸಾಗುತ್ತಿದೆ. ಕೊರಖನ ಕಾಲದ ಅಧಿವೇಶನ ಅತ್ಯಂತ ಪ್ರಧಾನ ಎಂದು ರಾಷ್ಟ್ರಪತಿ ಹೇಳಿದರು. ಆತ್ಮನಿರ್ಭರ್ ಭಾರತ್ ನಮ್ಮ ಘೋಷಣೆಯೆಂದು ಹೇಳಿದರು.

ಒಗ್ಗಟ್ಟು ಭಾರತದ ಶಕ್ತಿ. ಕೊರೋನ, ಪ್ರಕೃತಿ ದುರಂತಗಳನ್ನು ದೇಶ ಸಮರ್ಥವಾಗಿ ಎದುರಿಸಿದೆ. ಲಾಕ್‍ಡೌನ್ ಕಾಲದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ, ರೈಲು ಕೊಟ್ಟಿದ್ದೇವೆ. 80 ಕೋಟಿ ಜನರಿಗೆ ಪ್ರತಿದಿನ ಐದು ಕೆಜಿ ಆಹಾರ ವಸ್ತು ಕೋಡುತ್ತಿದ್ದೇವೆ, ಮರಳಿದ ಕಾರ್ಮಿಕರಿಗೆ ಗ್ರಾಮದಲ್ಲಿಯೇ ಕೆಲಸ ಖಚಿತಗೊಳಿಸಲಾಗುವುದು ಎಂದು ರಾಷ್ಟ್ರಪತಿ ಹೇಳಿದರು.