ರೈತ ಹೋರಾಟದ ಮರೆಯಲ್ಲಿ ಪಂಜಾಬಿನ 40 ಅನಾಜು ದಾಸ್ತಾನು ಕೇಂದ್ರಗಳ ಮೇಲೆ ಸಿಬಿಐ ದಾಳಿ

0
654

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ರೈತ ಹೋರಾಟ ದಿಲ್ಲಿಯಲ್ಲಿ ನಡೆಯುತ್ತಿರುವಂತೆ ಪಂಜಾಬಿನ ಗೋದಾಮುಗಳಿಗೆ ಸಿಬಿಐ ದಾಳಿ ಮಾಡಿದೆ. ಪಂಜಾಬಿನಲ್ಲಿ 40 ಕಡೆ ಸಿಬಿಐಯ ತಂಡ ದಾಳಿ ಮಾಡಿತು. ಇಲ್ಲಿದ್ದ ಅಕ್ಕಿ, ಗೋಧಿ ಸ್ಯಾಂಪಲ್‍ಗಳನ್ನು ತೆಗೆದುಕೊಂಡು ಹೋಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಪಂಜಾಬ್ ಗ್ರೈನ್ ಪ್ರೊಕ್ಯೂರ್‍ಮೆಂಟ್ ಕಾರ್ಪೊರೇಷನ್ (ಪನ್‍ಗ್ರೆಯಿನ್), ಪಂಜಾಬ್ ವೇರ್‍ಹೌಸಿಂಗ್, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ(ಎಫ್‍ಸಿಐ)ಗಳಲ್ಲಿ ಅರೆಸೈನಿಕ ಪಡೆಯೊಂದಿಗೆ ಸಿಬಿಐ ದಾಳಿ ನಡೆಸಿತ್ತು. 2019-20, 2020-21 ಅವಧಿಯಲ್ಲಿ ಸಂಗ್ರಹಿಸಿದ ಗೋಧಿ, ಅಕ್ಕಿಯ ಸ್ಯಾಂಪಲ್ ತಂಡ ಸಂಗ್ರಹಿಸಿದೆ.

ಕೃಷಿ ಕಾನೂನುಗಳ ವಿರುದ್ಧ ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ಪರೇಡ್‍ನಲ್ಲಿ ಪಂಜಾಬ್, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಿಂದ ರೈತರು ಭಾಗವಹಿಸಿದ್ದರು. ದೇಶದ ರಾಜಧಾನಿಯಲ್ಲಿ ನಡೆದ ಟ್ರಾಕ್ಟರ್ ಪರೇಡ್ ಘರ್ಷಣೆಯೆಡೆಗೆ ಹೊರಳಿತ್ತು. ಈ ಘರ್ಷಣೆಯ ಕುರಿತು ದೇಶದ ಗಮನವಿದ್ದಾಗ ಗೋದಾಮುಗಳಿಗೆ ಸಿಬಿಐ ದಾಳಿ ಮಾಡಿದೆ.