ಯೋಗೀಜಿ ದ್ವೇಷ, ಕೋಮುವಾದವನ್ನು ತನ್ನಿ; ಆದರೆ ಅಂತಿಮ ಗೆಲುವು ನಮ್ಮದು: ಹೋರಾಟ ಸ್ಥಳದಿಂದ ಯಾರೂ ಕದಲುವುದಿಲ್ಲ

0
839

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತರ ಪ್ರತಿಭಟನೆಯನ್ನು ದಮನಿಸಲು ಉತ್ತರ ಪ್ರದೇಶ ಸರಕಾರದ ಶ್ರಮವನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವ ಮೊಯಿತ್ರ ಟೀಕಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚನೆ ಮೇರೆಗೆ ಪ್ರತಿಭಟನೆಯ ಸ್ಥಳದಿಂದ ಯಾರೂ ಹೊರಟು ಹೋಗುವುದಿಲ್ಲ. ಇದು ನಮ್ಮ ಭೂಮಿಯಾಗಿದೆ. ಹೋರಾಟ ದಮಿಸಲು ಯಾವ ಮಾರ್ಗ ಉಪಯೋಗಿಸಿದರೂ ಹಿಂದೆ ಸರಿಯುವುದಿಲ್ಲ ಕೊನೆಗೆ ಜಯ ನಮ್ಮದಾಗಲಿದೆ ಎಂದು ಮುಹುವ ಟ್ವೀಟ್ ಮಾಡಿದ್ದಾರೆ.

ಯೋಗೀಜಿ ನಿಮ್ಮ ಸೂಚನೆ ಪ್ರಕಾರ ಯಾರೂ ಪ್ರತಿಭಟನೆಯ ಸ್ಥಳದಿಂದ ಹೊರಟು ಹೋಗುವುದಿಲ್ಲ. ಈ ನಮ್ಮದಾಗಿದೆ. ನಿಮಗೆ ಜಲ ಫಿರಂಗಿ ತರಬಹುದು. ನಿಮ್ಮ ಪೊಲೀಸರನ್ನೂ ಮಂಕಿ ಬ್ರಿಗೇಡನ್ನೂ ತನ್ನಿ, ದ್ವೇಷ, ಕೋಮುವಾದವನ್ನು ತನ್ನಿ, ನಾವು ಎದುರಿಸುತ್ತೇವೆ. ನಾವೇ ಜಯಶಾಲಿಗಳಾಗುತ್ತೇವೆ ಎಂದು ಮಹುವ ಹೇಳಿದ್ದಾರೆ.

ಗಣರಾಜ್ಯೋತ್ಸವದ ಅಹಿತಕರ ಘಟನೆಯ ಹೆಸರಿನಲ್ಲಿ ಬೃಹತ್ ಪೊಲೀಸರನ್ನು ಸೇರಿಸಲಾಗಿದೆ. ಕೇಂದ್ರ ಸೇನೆಯನ್ನು ಹೋರಾಟ ಕೇಂದ್ರಗಳಲ್ಲಿರಿಸಲಾಗಿದೆ. ಗುರುವಾರ ರಾತ್ರೆ 11 ಗಂಟೆಗೆ ಗಾಝಿಪುರ ತೆರವುಗೊಳಿಸಬೇಕೆಂದು ಉತ್ತರ ಪ್ರದೇಶ ಸರಕಾರ ನೋಟಿಸು ನೀಡಿತ್ತು. ನಂತರ ದಿಲ್ಲಿ, ಉತ್ತರ ಪ್ರದೇಶ ಪೊಲೀಸರು ಹೋರಾಟ ಕೇಂದ್ರವನ್ನು ಸುತ್ತುವರಿದ್ದರಿಂದ ಗಡಿ ಸಂಘರ್ಷಮಯವಾಗಿತ್ತು.

ನಾಯಕರನ್ನು ಬಂಧಿಸಿ ಹೋರಾಟವನ್ನು ತೆರವುಗೊಳಿಸುವ ಸರಕಾರದ ಯತ್ನವಿದು. ಗಾಝಿಪುರದಲ್ಲಿ ನಿಷೇಧಾಜ್ಞೆ ಹಾಕಲಾಯಿತು. ವಾಹನ ಸಂಚಾರ ನಿಷೇಧಿಸಲಾಗಿತ್ತು. ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘಟನೆಗಳು ತಿಳಿಸಿದ ನಂತರ ತೆರವು ಗೊಳಿಸುವ ಕ್ರಮವನ್ನು ತಡೆಹಿಡಿಯಲಾಗಿದೆ.