ಸನ್ಮಾರ್ಗ ವಾರ್ತೆ
ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಇರಾಕ್ಗೆ ಭೇಟಿ ಕೊಡುವ ವೇಳೆ ಪ್ರಮುಖ ಶಿಯಾ ನಾಯಕ ಆಯತುಲ್ಲ ಅಲಿ ಅಲ್ ಸಿಸ್ತಾನಿಯವರನ್ನು ಭೇಟಿಯಾಗಲಿದ್ದಾರೆ ಎಂದು ಹಿರಿಯ ಕ್ಯಾಥೊಲಿಕ್ ಪಾದ್ರಿ ಲುಯೀಸ್ ಸಾಕೊ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅಧಿಕೃತವಲ್ಲದೆ ಇಬ್ಬರು ಧಾರ್ಮಿಕ ನಾಯಕರು ಪರಸ್ಪರ ಭೇಟಿಯಾಗಲಿದ್ದು ಇದು ಖಾಸಗಿ ಸಂದರ್ಶನವಾಗಿದೆ ಎಂದು ಇರಾಕ್ ಕಲ್ದಿಯನ್ ಕ್ಯಾಥೊಲಿಕ್ ಸಭೆಯ ಗ್ರೋತ್ರ ಪ್ರಮುಖ್ ಲುಯಿಸ್ ಸಾಕೊ ಹೇಳಿದರು.
ಜಗತ್ತಿನ ಶಾಂತಿಗಾಗಿರುವ ಮಾನವೀಯ ಸಹೋದರ್ಯ ಎಂಬ ದಾಖಲೆಯಲ್ಲಿ ಇಬ್ಬರು ನಾಯಕರು ಸಹಿ ಹಾಕಲಿದ್ದಾರೆ ಎಂದು ಸಾಕೋ ನಿರೀಕ್ಷೆ ವ್ಯಕ್ತಪಡಿಸಿದರು. ಪ್ರಮುಖ ಸುನ್ನಿ ವಿದ್ವಾಂಸ ಅಲ್ ಅಝರ್ನ ಇಮಾಮ್ ಶೇಖ್ ಅಹ್ಮದ್ ಅತ್ವಯ್ಯಿಬ್ ಮತ್ತು ಪೋಪ್ ಪ್ರಾನ್ಸಿನ್ 2019ರಲ್ಲಿ ಸಹಿ ಹಾಕಿರುವ ಭಯೋತ್ಪಾದನೆಯ ವಿರುದ್ಧ ಧರ್ಮಗಳ ಸಹಕಾರ ಇದು. ಪೋಪ್ರು ಮಾರ್ಚ್ ಐದರಿಂದ ಎಂಟರವರೆಗೆ ಇರಾಕ್ಗೆ ಭೇಟಿ ನೀಡಲಿದ್ದಾರೆ.
ರಾಜಧಾನಿ ಬಾಗ್ದಾದ್, ಉತ್ತರದ ನಗರ ಮೊಸಿಲ್. ಪ್ರವಾದಿ ಇಬ್ರಾಹೀಮರು ಜನಿಸಿದ ಸ್ಥಳ ಉರ್ ಮುಂತಾದೆಡೆಗೆ ಪೋಪ್ ಭೇಟಿ ನೀಡಲಿದ್ದಾರೆ. ಅಮೆರಿಕ ನೇತೃತ್ವದ 2003ರ ಅತಿಕ್ರಮಣ, ವಿಭಾಗೀಯ ಯುದ್ಧ, ಇರಾಕಿನ ವಿವಿಧ ಕ್ರೈಸ್ತ ವಿಭಾಗಳ ಅನುಯಾಯಿಗಳು ಊರು ತೊರೆಯುವುದಕ್ಕೆ ಕಾರಣವಾಗಿತ್ತು. 2014ರ ಐಎಸ್ನ ಆಕ್ರಮಣಗಳು , ಅಲ್ಪಸಂಖ್ಯಾತ ಸಮೂಹಗಳನ್ನು ಗಂಭೀರವಾಗಿ ಬಾಧಿಸಿದೆ. ಈಗ ಇರಾಕಿನಲ್ಲಿ ನಾಲ್ಕು ಲಕ್ಷ ಕ್ರೈಸ್ತರಿದ್ದಾರೆ.












