ಮಧ್ಯಪ್ರದೇಶ: ಸರಕಾರಿ ಕಚೇರಿಗಳ ಶುಚೀಕರಣಕ್ಕೆ ಗೋಮೂತ್ರ ಫಿನಾಯಿಲ್

0
538

ಸನ್ಮಾರ್ಗ ವಾರ್ತೆ

ಭೋಪಾಲ,ಫೆ.1: ಸರಕಾರಿ ಕಚೇರಿಯ ಶುಚೀಕರಣಕ್ಕೆ ಗೋಮೂತ್ರ ಫಿನಾಯಿಲನ್ನು ಮಾತ್ರ ಉಪಯೋಗಿಸಬೇಕೆಂದು ಸರಕಾರ ಆದೇಶಿಸಿದೆ. ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವ ಫಿನಾಯಿಲ್ ಬದಲಿಗೆ ಸರಕಾರಿ ಕಚೇರಿಗಳಿಗೆ ಗೋಮೂತ್ರದಿಂದ ತಯಾರಿಸಲಾದ ಫಿನಾಯಿಲ್ ಉಪಯೋಗಿಸಬೇಕೆಂದು ಸಾರ್ವಜನಿಕ ಆಡಳಿತ ಕಾರ್ಯದರ್ಶಿ ನಿವಾಸ್ ಶರ್ಮ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಗೋಮೂತ್ರದ ಫಿನಾಯಿಲ್ ಬಳಕೆಯ ತೀರ್ಮಾನ ಕಳೆದ ನವೆಂಬರಿನಲ್ಲಿ ಗೋ ಸಚಿವ ಸಂಪುಟ ತಳೆದಿತ್ತು. ರಾಜ್ಯದಲ್ಲಿ ಗೋ ಸಂರಕ್ಷಣೆ ಗೋ ಸಾಕುವಿಕೆ ಪ್ರೋತ್ಸಾಹಿಸುವ ಭಾಗವಾಗಿ ಮತ್ತು ಗೋಮೂತ್ರ ಬಾಟ್ಲಿಂಗ್ ಪ್ಲಾಂಟ್‍ಗಳು, ಗೋಮೂತ್ರ ಫಿನಾಯಿಲ್ ನಿರ್ಮಾಣ ಪ್ಯಾಕ್ಟರಿಸುವ, ಪ್ರೋತ್ಸಾಹಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಣಿ ಸಂರಕ್ಷಣೆ ಇಲಾಖೆ ಸಚಿವ ಪ್ರೇಮ್‍ಸಿಂಗ್ ಪಟೇಲ್ ಹೇಳಿದ್ದಾರೆ.

ಹಾಲುತ್ಪಾದನೆ ನಿಲ್ಲಿಸಿದ ದನಗಳನ್ನು ಯಾರೂ ಬೀದಿಗೆ ಬಿಡಲಾರರು. ಇದು ಮಧ್ಯಪ್ರದೇಶ ಸರಕಾರದ ಅವಸ್ಥೆಯಲ್ಲಿ ಬದಲಾವಣೆ ತರಲಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ, ಫಿನಾಯಿಲ್ ನಿರ್ಮಿಸುವ ಖಾಸಗಿ ಕಂಪೆನಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಸರಕಾರ ತೀರ್ಮಾನಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಯಾವುದೇ ಮೂಲಭೂತ ವ್ಯವಸ್ಥೆ ಮಾಡದೆ ಸರಕಾರ ಇಂತಹ ತೀರ್ಮಾನ ಘೋಷಿಸುತ್ತಿದೆ.

ಜಾನುವಾರುಗಳು ಮತ್ತು ಜಾನುವಾರಗಳ ಉತ್ಪನ್ನವನ್ನು ಪ್ರೋತ್ಸಾಹಿಸುವುದು ಉದ್ದೇಶವಾದರೆ ಮೊದಲು ರಾಜ್ಯದಲ್ಲಿ ಕೆಲವು ಫ್ಯಾಕ್ಟರಿಯನ್ನು ಸರಕಾರ ತೆರೆಯಬೇಕು. ಇನ್ನು ಫಿನಾಯಿಲ್ ತಯಾರಿಸುವ ಕೆಲಸವು ಉತ್ತರಾಖಂಡದ ಖಾಸಗಿ ಕಂಪೆನಿಗಳಿಗೆ ಸಿಗಲಿದೆ ಎಂದು ಕಾಂಗ್ರೆಸ್ ಶಾಸಕ ಕುನಾಲ್ ಚೌಧರಿ ಹೇಳಿದರು.