ಕೇಂದ್ರ ಬಜೆಟ್: ಖಾಸಗಿ ವಾಹನಗಳಿಗೆ 20 ವರ್ಷ, ವಾಣಿಜ್ಯ ವಾಹನಗಳಿಗೆ 15 ವರ್ಷ ಬಳಕೆ ಮಿತಿ

0
463

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಾಹನಗಳನ್ನು ಎಷ್ಟರವರೆಗೆ ಉಪಯೋಗಿಸಬಹುದು ಎಂಬ ಚರ್ಚೆಗೆ ಕೇಂದ್ರ ಸರಕಾ ಇಂದು ತನ್ನ ಬಜೆಟ್ ನಲ್ಲಿ ಆಯುಷ್ಯ ಘೋಷಿಸಿದೆ. ಖಾಸಗಿ ವಾಹನಗಳನ್ನು 20 ವರ್ಷ ಬಳಸಬಹುದು. ವಾಣಿಜ್ಯೋಪಯೋಗಿ ವಾಹನಗಳನ್ನು 15 ವರ್ಷ ಬಳಸಬಹುದು. ನಂತರ ಅಟೊಮೇಟೆಡ್ ಫಿಟ್‍ನೆಸ್ ಸೆಂಟರ್ ಪರೀಕ್ಷೆಗೊಳಪಡಿಸಿ ಗುಜರಿಗೆ ಕೊಡಲಾಗುವುದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‍ ಇಂದು ಮಂಡಿಸಿದ 2021-22ರ ಬಜೆಟ್‍ನಲ್ಲಿ ಈ ಅಂಶವನ್ನು ಸೇರಿಸಲಾಗಿದೆ.

ಇದರೊಂದಿಗೆ ವಾಹನ ಮಾರಾಟದಲ್ಲಿ ಬೃಹತ್ ಏರಿಕೆಯಾಗಬಹುದು ಎಂದು ಉದ್ಯಮ ಜಗತ್ತಿನಲ್ಲಿ ನಿರೀಕ್ಷೆ ಮೂಡಿದೆ. ಹಳೆಯ ವಾಹನಗಳನ್ನು ಮಾರುವುದರಿಂದ ಹೊಸ ವಾಹನಗಳ ಆವಶ್ಯಕತೆ ಹೆಚ್ಚಲಿದೆ. 43,000 ಕೋಟಿ ರೂಪಾಯಿ ಬಿಸಿನೆಸ್ ಅವಕಾಶ ಲಭಿಸಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಇದೇ ವೇಳೆ ಜನಸಾಮಾನ್ಯರಿಗೆ ಇದು ದೊಡ್ಡ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ಜನರು ಹೊಸ ವಾಹನ ಖರೀದಿಸಲು ನಿರ್ಬಂಧಿತರಾಗುವುದರೊಂದಿಗೆ ಹಳೆ ವಾಹನ ಮಾರುಕಟ್ಟೆ ಕುಸಿಯಲಿದೆ.

ಹೊಸ ಕಾನೂನಿನಿಂದ ವಾಯು ಮಾಲಿನ್ಯ ಪರಿಸರಕ್ಕೆ ಹಾನಿಯನ್ನು ತಡೆಯಬಹುದು. ಇಂಧನ ಕ್ಷಮತೆ, ಪರಿಸರ ಸೌಹಾರ್ದವಾದ ವಾಹನಗಳನ್ನು ಪ್ರೋತ್ಸಾಹಿಸಿ ಮಲಿನೀಕರಣದ ಪ್ರಮಾಣ ಕಡಿಮೆ ಮಾಡಬಹುದುಸರಕಾರ ಆಶಾವಾದ ವ್ಯಕ್ತಪಡಿಸಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 5 ವರ್ಷಕ್ಕಿಂತ ಹೆಚ್ಚು ಹಳೆಯ ಸರಕಾರಿ, ಸಾರ್ವಜನಿಕ ಕ್ಷೇತ್ರದ ವಾಹನಗಳನ್ನು ಕಂಡಂ ಮಾಡಲು ಅಂಗೀಕಾರ ಕೊಟ್ಟಿದ್ದಾರೆ. ಹೊಸ ನೀತಿ 2022 ಎಪ್ರಿಲ್ ಒಂದರಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ.