ಅಲ್‍ಕುದ್ಸ್ ವಿಶ್ವವಿದ್ಯಾನಿಲಯಕ್ಕೆ ಹೋಗದಂತೆ ತಡೆದ ಇಸ್ರೇಲ್

0
1053

ಅಬುದಿಸ್: ಜೆರುಸಲೇಂನ ಅಲ್ ಕುದ್ಸ್ ವಿಶ್ವವಿದ್ಯಾನಿಲಯ ಮತ್ತು ಅದರ ಸಮೀಪದ ಶಾಲೆಗಳಿಗೆ ಪ್ರವೇಸಿಶದಂತೆ ಇಸ್ರೇಲಿನ ಅತಿಕ್ರಮಣಕೋರ ಸೇನೆ ತಡೆಹಿಡಿದಿದೆ.ಅಬುದಿಸ್ ನಗರದ ಸಮೀಪದ ಈಶಾನ್ಯ ಜೆರುಸಲೇಮ್‍ನಲ್ಲಿ ಅಲ್‍ಕುದ್ಸ್ ವಿವಿ ಇದೆ. ವಿದ್ಯಾರ್ಥಿಗಳನ್ನು ಮತ್ತು ಇತರರನ್ನು ವಿಶ್ವವಿದ್ಯಾನಿಲಯ ಕಂಪೌಡಿಗೆ ಪ್ರವೇಶಿಸದಂತೆ ಸೇನೆ ತಡೆಯೊಡ್ಡಿದೆ.

ಅಲ್‍ಮಾಹದ್ ಅಲ್ ಅರಬಿ, ಅಬುದಿಸ್ ಸೆಕಂಡರಿ, ಪ್ರೈಮರಿ ಸ್ಕೂಲಿಗೆ ಹೋಗದಂತೆ ಮತ್ತು ವಿಶ್ವವಿದ್ಯಾನಿಲಯದ ಸಮೀಪದಲ್ಲಿ ಸೇನೆ ಅಕ್ರಮವೆಸಗಿದೆ. ನಂತರ ವಿದ್ಯಾರ್ಥಿಗಳು ಮತ್ತು ಸೇನೆಯ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ವೆಸ್ಟ್ ಬ್ಯಾಂಕಿನ ಅತಿಕ್ರಮಣ ಪ್ರತಿರೋಧ ಕಮಿಟಿಯ ವಕ್ತಾರ ಹನಿ ಹಲಬಿಯ್ಯ ತಿಳಿಸಿದ್ದಾರೆ.