ರೈತ ಕ್ರಾಂತಿ: ಬೇಡಿಕೆ ಈಡೇರುವವರೆಗೂ ಮನೆಗೆ ಮರಳುವ ಮಾತೇ ಇಲ್ಲ- ರೈತ ನಾಯಕ ಟಿಕಾಯತ್

0
370

ಸನ್ಮಾರ್ಗ ವಾರ್ತೆ

ಹರಿಯಾಣ: ನಮ್ಮ ಬೇಡಿಕೆಗಳು ಈಡೇರುವವರೆಗೂ ಮನೆಗೆ ಮರಳಿ ಹೋಗುವ ಮಾತೇ ಇಲ್ಲ ಎಂಬುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರು ಹೋರಾಟ ಜನಾಂದೋಲನವಾಗಿ ಮಾರ್ಪಟ್ಟಿದ್ದು ಅದು ವಿಫಲವಾಗುವುದಿಲ್ಲ ಎಂಬ ಅಚಲ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು, ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡಬೇಕು ಮತ್ತು ಇತ್ತೀಚಿಗೆ ಬಂಧನಕ್ಕೊಳಗಾದ ರೈತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ರೈತರ ಹೋರಾಟವನ್ನು ಬೆಂಬಲಿಸುತ್ತಿರುವ ಕಾಪ್ ಪಂಚಾಯತ್‌ಗಳು(ಜಾತಿ ಸಮಿತಿಗಳು) ಸೇರಿ ಮುಖಂಡರ ಪಾತ್ರವನ್ನು ಟಿಕಾಯತ್ ಹೊಗಳಿದರು.