ಮಲಪ್ಪುರಂ: ಎರಡು ಶಾಲೆಗಳ 192 ವಿದ್ಯಾರ್ಥಿಗಳು 72 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್…!

0
461

ಸನ್ಮಾರ್ಗ ವಾರ್ತೆ

ಮಲಪ್ಪುರಂ(ಕೇರಳ): ಮಲಪ್ಪುರಂನ ಎರಡು ಶಾಲೆಗಳ 192 ವಿದ್ಯಾರ್ಥಿಗಳು ಹಾಗೂ 72 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಮಲಪ್ಪುರಂ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಇಲ್ಲಿನ ಮಟ್ಟನ್ ಚೇರಿ ಹೈಯರ್ ಸೆಕೆಂಡರಿ ಶಾಲೆಯ 149 ವಿದ್ಯಾರ್ಥಿಗಳು ಹಾಗೂ 39 ಸಿಬ್ಬಂದಿಗಳಿಗೆ ಹಾಗೂ ವನ್ನೇರಿ ಹೈಯರ್ ಸೆಕೆಂಡರಿ ಶಾಲೆಯ 43 ವಿದ್ಯಾರ್ಥಿಗಳು ಹಾಗೂ 33 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಆಗಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ. ಈ ಘಟನೆಯು ಕೇರಳದಾಧ್ಯಂತ ಶಾಲಾ ಮಕ್ಕಳ ಪೋಷಕರಲ್ಲಿ ಸಂಚಲನ ಸೃಷ್ಟಿಸಿದೆ. ಕೇರಳದಲ್ಲಿ ಒಂದೇ ದಿನದಲ್ಲಿ 6,075 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.

ಕೇಂದ್ರೀಯ ಆರೋಗ್ಯ ಇಲಾಖೆಯ ಪ್ರಕಾರ ಕೇರಳದಲ್ಲಿ ಈಗಾಗಲೇ 67,903 ಪಾಸಿಟಿವ್ ಪ್ರಕರಣ ಇರುವುದಾಗಿ ತಿಳಿಸಿದೆ. 8,96,668 ಮಂದಿ ಗುಣ ಮುಖರಾಗಿದ್ದರೆ, 3,867 ಮಂದಿ ಈಗಾಗಲೇ ಮೃತಪಟ್ಟಿರುವುದಾಗಿ ಹೇಳಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,48,609 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿರುವುದಾಗಿ ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.