ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಫೆ.12: ರಾಜ್ಯಸಭೆಯಲ್ಲಿ ಪ್ರತಿಪಕ್ಷನಾಯಕರಾಗಿ ಗುಲಾಮ್ ನಬಿ ಆಝಾದ್ರಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ ವಿಷಯವನ್ನು ಕಾಂಗ್ರೆಸ್ ರಾಜ್ಯಸಭಾ ಅಧ್ಯಕ್ಷರಿಗೆ ತಿಳಿಸಿದೆ.
ಪಿ. ಚಿದಂಬರಂ, ಆನಂದ್ ಶರ್ಮ, ದಿಗ್ವಿಜಯ ಸಿಂಗ್ ಹೆಸರು ಪ್ರತಿಪಕ್ಷ ನಾಯಕರ ಸ್ಥಾನದಲ್ಲಿ ಪರಿಗಣನೆಗೊಳಗೊಂಡಿತ್ತು. ನಂತರ ಹೈಕಮಾಂಡ್ ನೇತೃತ್ವದಲ್ಲಿ ಈ ಹೆಸರುಗಳಲ್ಲಿ ಖರ್ಗೆಯವರನ್ನು ಆಯ್ಕೆ ಮಾಡಲಾಗಿತ್ತು.
ಮಂಗಳವಾರ ಗುಲಾಮ್ ನಬಿ ಆಝಾದ್ರ ಕಾರ್ಯಕಾಲ ಕೊನೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಗುಲಾಮ್ ನಬಿ ಆಝಾದ್ರವರಿಗೆ ಭಾವನಾತ್ಮಕ ವಿದಾಯ ಕೋರಿದ್ದರು.












