ಭವಿಷ್ಯವನ್ನು ಮುಂದಿಟ್ಟು ಪೆಟ್ರೋಲ್‍ಗೆ ಬೆಲೆ ಹೆಚ್ಚಳವಾಗಿದೆ: ಮೋದಿಯನ್ನು ಅಭಿನಂದಿಸಿದ ಮಧ್ಯಪ್ರದೇಶ ಸಚಿವ

0
395

ಸನ್ಮಾರ್ಗ ವಾರ್ತೆ

ಭೋಪಾಲ: ದೇಶದಲ್ಲಿ ಪ್ರ್ರತಿ ದಿನ ಪೆಟ್ರೋಲ್ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಜನರು ಆಕ್ರೋಶಗೊಂಡಿದ್ದರೆ, ಇಲ್ಲೊಬ್ಬ ಮಧ್ಯಪ್ರದೇಶದ ಸಚಿವ ವಿಶ್ವಾಸ ಸಾರಂಗ ಪ್ರಧಾನಿಯನ್ನು ಅಭಿನಂದಿಸಿದ್ದಾರೆ. ಮಧ್ಯಪ್ರದೇಶದ ಶಿಕ್ಷಣ ಸಚಿವರಾಗಿರುವ ವಿಶ್ವಾಸ್ ಸಾರಂಗ್, ದೇಶದಲ್ಲಿ ಸೋಲಾರ್, ವಿದ್ಯುತ್ ಇಂಧನ ಉಪಯೋಗ ಹೆಚ್ಚಿಸುವುದಕ್ಕಾಗಿ ಮೋದಿ ಈ ಕೆಲಸಕ್ಕಿಳಿದಿದ್ದಾರೆ. ಜಾಗತಿಕ ಮಟ್ಟದ ತೈಲ ದರ ನಿರ್ಣಯದಲ್ಲಿ ಭಾರತಕ್ಕೆ ಇದರಿಂದ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ.

ನೋಡಿರಿ, ನಾನು ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸುತ್ತೇನೆ. ಅಂತಾರಾಷ್ಟ್ರೀಯ ಬೆಲೆ ನಿರ್ಣಯಿಸುವುದಕ್ಕೆ ಸೋಲಾರ್ ಇಂಧನ ಉಪಯೋಗ , ಸಾರಿಗೆ ಕ್ಷೇತ್ರದಲ್ಲಿ ಉಪಯೋಗಿಸಲು ದಾರಿ ಮಾಡಿಕೊಡುತ್ತದೆ. ಮೋದಿಯ ಕ್ರಮ ವಿದ್ಯುತ್ ವಾಹನಗಳನ್ನು ಪ್ರೋತ್ಸಾಹಿಸಲಿದೆ. ಅದರ ಮೂಲಕ ಅಂತಾರಾಷ್ಟ್ರೀಯ ತೈಲ ದರವನ್ನು ಭಾರತಕ್ಕೆ ನಿಯಂತ್ರಿಸಲು ಸಾಧ್ಯವಾಗಬಹುದು ಎಂದು ತೈಲ ದರ ನಿಯಂತ್ರಣಕ್ಕೆ ರಾಜ್ಯ ತೆರಿಗೆ ಕಡಿಮೆ ಮಾಡುವಯೋಚನೆಯಿದೆಯೇ ಎಂಬ ಪ್ರಶ್ನೆಗೆ ಸಚಿವರು ಹೀಗೆ ಉತ್ತರಿಸಿದರು.

ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪಾದನೆ, ಬೇಡಿಕೆಗಳು ಬೆಲೆ ನಿರ್ಣಯಿಸುತ್ತದೆ. ಬೇಡಿಕೆ ಕಡಿಮೆ ಮಾಡಿದರೆ ದೇಶದ ಬೆಲೆಯಲ್ಲಿ ನಿಯಂತ್ರಣ ತರಬಹುದು. ಆದ್ದರಿಂದ ದೇಶದ ವಿದ್ಯುತ್ ಚಾಲಿತ ವಾಹನಗಳು ತರಲು ಮೋದಿ ತೀರ್ಮಾನಿಸಿದ್ದು . ನಮಗೆ ತೈಲ ದರ ನಿಯಂತ್ರಿಸಲು ಸಾಧ್ಯವಿದೆ ಎಂದು ವಿಶ್ವಾಸ್ ಸಾರಂಗ್ ಹೇಳಿದರು.

ಪೆಟ್ರೋಲ್,ಡೀಸೆಲ್‍ಗೆ ಅತೀ ಹೆಚ್ಚು ವ್ಯಾಟ್ ತೆರಿಗೆಯನ್ನು ಹಾಕುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಒಂದು. ಪೆಟ್ರೋಲ್‍ಗೆ 4.50 ಮತ್ತು ಡಿಸೆಲ್‍ಗೆ 2 ರೂಪಾಯಿ ವ್ಯಾಟ್ ಹಾಕುತ್ತಿದೆ. ಮಧ್ಯಪ್ರದೇಶದಲ್ಲಿ ಪೆಟ್ರೋಲ್ ದರ ನೂರು ರೂಪಾಯಿ ದಾಟಿತ್ತು. ದೇಶದಲ್ಲಿ ಮೊದಲ ಬಾರಿ ರಾಜಸ್ಥಾನದ ಶ್ರೀಗಂಗಾನಗರ ಮತ್ತು ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ಪೆಟ್ರೊಲ್‍ನ ಬೆಲೆ ನೂರು ರೂಪಾಯಿ ದಾಟಿತ್ತು. ಇಂಧನ ಬೆಲೆ ಕಡಿಮೆ ಮಾಡುವ ಸಲುವಾಗಿ ಅಸ್ಸಾಮ್, ಮೇಘಾಲಯ ಸರಕಾರಗಳು ವ್ಯಾಟ್ ದರ ಕಡಿಮೆ ಮಾಡಿದ್ದವು.

ವಿಡಿಯೋ ಕೃಪೆ: NDTV