ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿದ್ದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ಸಾವು: ಆಸ್ಪತ್ರೆಯ ವಿರುದ್ಧ ಪ್ರತಿಭಟನೆ

0
807

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ: ಕೊರೋನ ವ್ಯಾಕ್ಸಿನ್ ಚುಚ್ಚಿಸಿಕೊಂಡ ಬೆನ್ನಿಗೆ ಮೆಡಿಕಲ್ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿದ್ದು, ಆಸ್ಪತ್ರೆಯ ವಿರುದ್ಧ ಕುಟುಂಬ ಪ್ರತಿಭಟನೆ ನಡೆಸುತ್ತಿದ್ದಾರೆ.

ಮುತ್ತೊಟ್ಟಂ ಕೃಷ್ಣಮೋಹನ್ ಮೋಹನ್ ಎಂಬವರ ಮಗಳಾದ ವೈದ್ಯಕೀಯ ವಿದ್ಯಾರ್ಥಿನಿ ಮಿತಾ ಮೋಹನ್(24) ಲಸಿಕೆ ಚುಚ್ಚಿಸಿಕೊಂಡ ಬಳಿಕ ಮೃತಪಟ್ಟಿದ್ದಾರೆ.

ವ್ಯಾಕ್ಸಿನ್ ಸೈಡ್‍ ಇಫೆಕ್ಟನ್ನು ಆಸ್ಪತ್ರೆಯ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದು, ಮಿತಾರ ಸಾವಿಗೆ ಕಾರಣವೆಂದು ಮನೆಯವರು ಹೇಳಿದ್ದಾರೆ.

ಪೆರಿಯಾರಂ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಬಿಡಿಎಸ್ ವಿದ್ಯಾರ್ಥಿನಿಯಾಗಿದ್ದ ನಿತಾರಿಗೆ ವ್ಯಾಕ್ಸಿನ್ ತೆಗೆದುಕೊಂಡು ಮೇಲೆ ತಲೆನೋವು ಕಂಡು ಬಂತಲ್ಲದೇ, ವಾಂತಿ ಮಾಡಲಾರಂಭಿಸಿದ್ದಳು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೆ ಪ್ಯಾರಾಸಿಟಮೋಲ್ ಸಾಕೆಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರು.

ಕೊರೋನಾ ದೃಢಪಟ್ಟಿದ್ದರಿಂದ ತಾಯಿಯನ್ನು ಕೂಡ ಮಗಳನ್ನು ನೋಡಲು ಆಸ್ಪತ್ರೆಯವರು ಬಿಟ್ಟಿರಲಿಲ್ಲ. ಮೆದುಳಿನಲ್ಲಿ ರಕ್ತಸ್ರಾವವಾದ್ದರಿಂದ ಮಿತಾ ಸಾವನ್ನಪಿದ್ದಳು.

ವ್ಯಾಕ್ಸಿನ್ ಬಳಿಕ ಉಂಟಾದ ಆರೋಗ್ಯ ಸಮಸ್ಯೆಯನ್ನು ಪೆರಿಯಾರಂ ಮೆಡಿಕಲ್ ಕಾಲೇಜು ಅಧಿಕಾರಿಗಳು ನಿರ್ಲಕ್ಷಿಸದೇ ಇದ್ದಿದ್ದರೆ ಮಗಳ ಜೀವ ಉಳಿಯುತ್ತಿತ್ತು ಎಂದು ತಂದೆ ಮೋಹನನ್ ಹೇಳಿದ್ದಾರೆ.

ಚಿಕಿತ್ಸೆಯ ಉಪಚಾರದಲ್ಲೋ, ನೋಡುವುದರಲ್ಲೋ ಕೊರತೆ ಆಗಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.