ಸನ್ಮಾರ್ಗ ವಾರ್ತೆ
ಮುಂಬೈ: ಬಿಜೆಪಿ ವಿರುದ್ಧ ಕಟು ಟೀಕೆಯನ್ನು ಶಿವಸೇನೆ ಮುಖವಾಣಿ ಸಾಮ್ನಾ ಪ್ರಕಟಿಸಿದೆ. ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಸರಕಾರವನ್ನು ಕೆಳಗಿಳಿಸಿದಂತೆ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ ಎಂದು ಸಾಮ್ನಾ ಸಂಪಾದಕೀಯ ಬರೆದಿದೆ.
ಮಹಾರಾಷ್ಟ್ರ ಸರಕಾರವನ್ನು ದೂಡಿಹಾಕಬಹುದೆಂಬುದು ಬಿಜೆಪಿಯ ಒಂದು ಕನಸಾಗಿಯೇ ಉಳಿಯಲಿದೆ. ಕಾಂಗ್ರೆಸ್ ಆಳ್ವಿಕೆಯ ರಾಜ್ಯದಲ್ಲಿ ನಡೆದಂತೆ ಮಹಾರಾಷ್ಟ್ರದಲ್ಲಿ ನಡೆಯಲ್ಲ ಎಂದು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಡಿ, ಸಿಬಿಐ, ಅದಾಯ ತೆರಿಗೆ ಇದನ್ನು ಬಿಜೆಪಿ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ಬಳಸುತ್ತಿದೆ. ಒಂದು ಕಾಲದಲ್ಲಿ ಆಧಿಪತ್ಯ ಹೊಂದಿದ್ದ ಕಾಂಗ್ರೆಸ್ ದಕ್ಷಿಣ ಭರತದಲ್ಲಿ ಏನೂ ಅಲ್ಲದಂತಾಗಿದೆ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.
ಶಿವಸೇನೆ, ಎನ್ಸಿಪಿ, ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಸರಕಾರ ನಡೆಸುತ್ತಿದೆ. ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಸಖ್ಯಕ್ಕೆ ಮೇಲುಗೈ ಸಿಕ್ಕಿದರೂ ಕೂಡಾ ಮುಖ್ಯಮಂತ್ರಿ ಸ್ಥಾನದ ಕುರಿತು ಬಳಿಕ ನಡೆದ ವಿವಾದದಲ್ಲಿ ಬಿಜೆಪಿಯ ಸಖ್ಯ ಕಡಿದುಕೊಂಡಿದ್ದ ಶಿವಸೇನೆಯು ಕಾಂಗ್ರೆಸ್ , ಎನ್ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಮಹಾರಾಷ್ಟ್ರದಲ್ಲಿ ಶಿವಸೇನೆ 57,ಎನ್ಸಿಪಿ 53, ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ. ಬಿಜೆಪಿಗೆ 105 ಶಾಸಕರಿದ್ದಾರೆ.












