ಸನ್ಮಾರ್ಗ ವಾರ್ತೆ
ಹಾಸನ: ಜಮಾಅತೆ ಇಸ್ಲಾಮೀ ಹಿಂದ್ ಹಾಸನ ಘಟಕದ ವತಿಯಿಂದ ಗಣ್ಯ ವ್ಯಕ್ತಿಗಳಿಗಾಗಿ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ಮಾರ್ಚ್ 18 ಮತ್ತು 19ರಂದು ನಗರದ ಇಸ್ಲಾಮಿಕ್ ಸೆಂಟರ್ ನಲ್ಲಿ ಬಹಳ ಯಶಸ್ವಿಯಾಗಿ ಜರುಗಿತು. ‘ಯಶಸ್ವಿ ಜೀವನ’ ಹಾಗೂ ‘ಸ್ವಸ್ಥ ಸಮಾಜ’ ಎಂಬ ವಿಷಯಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಕಾರ್ಯದರ್ಶಿ ಜ| ಮುಹಮ್ಮದ್ ಕುಂಞಯವರು ಪ್ರವಚನ ನೀಡಿದರು.
ಪ್ರಥಮ ದಿನ ಹಾಸನ ಜಿಲ್ಲಾಧಿಕಾರಿ ಶ್ರೀ ಆರ್.ಗಿರೀಶ್ ಐಎಎಸ್, ಶ್ರೀ ಮೋಹನ್, ಅಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶ್ರೀ ಪ್ರಸನ್ನ ಕುಮಾರ್, ಅಧ್ಯಕ್ಷರು ಹಾಸನ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಎರಡನೆಯ ದಿವಸ ಶ್ರೀ ಶ್ರೀನಿವಾಸ ಗೌಡ ಐಪಿಎಸ್, ಎಸ್ಪಿ ಹಾಸನ ಜಿಲ್ಲೆ, ಶ್ರೀ ಕೆ.ಎಸ್. ಪ್ರಕಾಶ್ ಡಿಡಿಪಿಐ, ಹಾಸನ, ಶ್ರೀ ನಾಯಕರಹಳ್ಳಿ ಮಂಜೇಗೌಡ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಹಾಗೂ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಾಸನ ನಗರದ ಪ್ರಮುಖ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಹಾಸನ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಂಡಿರುವ 9ನೆ ಬಾರಿಯ ಸಾರ್ವಜನಿಕ ಕುರ್ಆನ್ ಪ್ರವಚನ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮದ ಪ್ರಯುಕ್ತ ಶಾಂತಿ ಪ್ರಕಾಶನದ ವತಿಯಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು 40 ಸಾವಿರ ರೂ.ಗಿಂತಲೂ ಅಧಿಕ ಮೌಲ್ಯದ ಪುಸ್ತಕಗಳು ಮಾರಾಟಗೊಂಡಿದೆ.












