ರಾಜಸ್ಥಾನದಲ್ಲಿ ಸೇನಾ ವಾಹನ ಪಲ್ಟಿ; ಮೂವರು ಯೋಧರ ಸಜೀವ ದಹನ

0
374

ಸನ್ಮಾರ್ಗ ವಾರ್ತೆ

ಜೈಪುರ: ರಾಜಸ್ಥಾನದಲ್ಲಿ ಸೈನಿಕರಿದ್ದ ವಾಹನವೊಂದು ಪಲ್ಟಿಯಾಗಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ. ಸೂರತ್‍ನಗರ್ ಜಿಲ್ಲೆಯ ರಾಜಿಯಸರ್ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಅಪಘಾತ ನಡೆಯಿತು.

ವಾಹನ ಪಲ್ಟಿಯಾಗಿ ಬೆಂಕಿ ಹಿಡಿದುಕೊಂಡಿದ್ದು ಅವಘಡದ ವ್ಯಾಪ್ತಿ ಹೆಚ್ಚಳಕ್ಕೆ ಕಾರಣವಾಗಿದೆ. ಐವರು ಸೈನಿಕರನ್ನು ಕೂಡಲೇ ವಾಹನದಿಂದ ಹೊರತೆಗೆಯಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನದೊಳಗೆ ಸಿಲುಕಿದ ಮೂವರು ಮೃತಪಟ್ಟಿರುವುದಾಗಿ ಸ್ಟೇಷನ್ ಹೌಸ್ ಆಫಿಸರ್ ವಿಕ್ರಮ್ ತಿವಾರಿ ಹೇಳಿದರು.