ಕರ್ನಾಟಕದ ಬೈಕರ್ ಅನ್ನು ತಡೆದು ನಿಲ್ಲಿಸಿದ ತಮಿಳುನಾಡು ಪೊಲೀಸ್: ಮುಂದೇನಾಯ್ತು ಎಂಬುದನ್ನು ಓದಿದರೆ ನೀವೂ ಮೆಚ್ಚುತ್ತೀರಾ; ವೈರಲ್ ಆಗಿದೆ ವಿಡಿಯೋ

0
1768

ಸನ್ಮಾರ್ಗ ವಾರ್ತೆ

ಬೆಂಗಳೂರು: ಪೊಲೀಸರು ಸಾಧಾರಣವಾಗಿ ಬೈಕ್, ಕಾರು ಮತ್ತಿತರ ವಾಹನಗಳನ್ನು ನಿಲ್ಲಿಸೋದು ದಾಖಲೆ ಮತ್ತಿತರ ತಪಾಸಣೆಗಾಗಿ. ಆದರೆ ತಮಿಳುನಾಡಿನ ಪೊಲೀಸ್ ಸಿಬ್ಬಂದಿಯೋರ್ವರು ಕರ್ನಾಟಕದ ಬೈಕರ್ ಓರ್ವನನ್ನು ತಡೆದು ನಿಲ್ಲಿಸಿ ಬಳಿಕ ನಡೆದ ಘಟನೆ ನೆಟ್ಟಿಗರ ಹಾಗೂ ಸಾರ್ವಜನಿಕರ ಹೃದಯ ಗೆದ್ದಿದ್ದು, ಘಟನೆಯ ವಿಡಿಯೋ ಬೈಕರ್ ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ಬಳಿಕ ವೈರಲ್ ಆಗಿದೆ.

ಘಟನೆಯ ವಿವರ: ತಮಿಳುನಾಡಿನ ತೆಂಕಸಿಗೆ ತೆರಳುತ್ತಿದ್ದ ಬೈಕರ್ ‌ನನ್ನು ಮಿಳುನಾಡಿನ ಪೊಲೀಸ್ ಸಿಬ್ಬಂದಿಯೋರ್ವರು ತಡೆದು ನಿಲ್ಲಿಸಿದರು. ಅನ್ನಿಅರುನ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿ ಬೈಕ್‌ ಸವಾರ ಕರ್ನಾಟಕದವನೇ ಎಂದು ಕೇಳುತ್ತಿರುವುದು ಕಂಡು ಬರುತ್ತದೆ. ಬೈಕರ್ ಹೌದು ಎಂದು ಹೇಳಿದ ನಂತರ, ಮುಂದೆ ಒಂದು ಸರಕಾರಿ ಬಸ್ ಹೋಯಿತು. ಅದರಲ್ಲಿ ಒಬ್ಬ ವೃದ್ಧೆ ತನ್ನ ಔಷಧಿ ಬಾಟಲಿಯನ್ನು ಕೈಬಿಟ್ಟಿದ್ದಾಳೆ. ಬಸ್ ಬೆನ್ನಟ್ಟಿ ಆ ವೃದ್ಧೆಗೆ ತಲುಪಿಸುವಂತೆ ವಿನಂತಿ ಮಾಡಿದ್ದಾರೆ.

ಬೈಕರ್ ತನ್ನ ಬೈಕನ್ನು ವೇಗವಾಗಿ ಚಲಾಯಿಸಿ ಬಸ್ಸನ್ನು ಬೆನ್ನಟ್ಟಿ ಚಾಲಕನನ್ನು ನಿಲ್ಲಿಸಲು ಕೇಳುತ್ತಾನೆ. ಬಸ್ ನಿಲ್ಲುತ್ತಿದ್ದಂತೆ, ವೃದ್ಧೆಗೆ ಪೊಲೀಸ್ ಸಿಬ್ಬಂದಿ ನೀಡಿದ್ದ ಔಷಧಿ ಬಾಟಲಿಯನ್ನು ವೃದ್ಧೆಯ ಕೈಗೆ ಒಪ್ಪಿಸಿ, ಮಾನವೀಯತೆ ಮೆರೆದಿದ್ದಾನೆ.

ಮಾ. 23 ರಂದು ಯೂಟ್ಯೂಬ್‌ನಲ್ಲಿ ಅನ್ನಿಅರುನ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಮಾಧ್ಯಮಗಳ ಗಮನ ಸೆಳೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಪೊಲೀಸ್, ಬೈಕರ್ ಹಾಗೂ ಸಹಕರಿಸಿದ ಎಲ್ಲರನ್ನು ಶ್ಲಾಘಿಸಿದ್ದಾರೆ. ಪೊಲೀಸರಲ್ಲೂ ಮಾನವೀಯತೆ ಎಂದು ಹೆಚ್ಚಿನ ಮಂದಿ ಕಮೆಂಟ್ ಮಾಡಿದ್ದಾರೆ.

ವೈರಲ್ ಆಗಿರುವ ಘಟನೆಯ ವಿಡಿಯೋ ನೋಡಿ.