ಮ್ಯಾನ್ಮಾರ್ ಸೇನೆಯಿಂದ 300ಕ್ಕೂ ಹೆಚ್ಚು ನಾಗರಿಕರ ಹತ್ಯೆ: ವರದಿ

0
907

ಸನ್ಮಾರ್ಗ ವಾರ್ತೆ

ಯಾಂಗೋನ್: ಮ್ಯಾನ್ಮಾರ್ ಸೈನಿಕ ಬುಡಮೇಲು ಕೃತ್ಯದ ವಿರುದ್ಧ ಭುಗಿಲೆದ್ದ ಪ್ರತಿಭಟನೆಯನ್ನು ದಮನಿಸಲು ಹೊರಟ ಸೇನೆಯು ಗುಂಡು ಹಾರಿಸಿ 300ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಿದೆ ಎಂದು ವರದಿಯಾಗಿದೆ. ಮ್ಯಾನ್ಮಾರ್ ಅಸಿಸ್ಟೆಂಟ್ ಅಸೋಸಿಯೇಶನ್ ಫಾರ್ ಪಾಲಿಟಿಕಲ್ ಪ್ರಿಸಿನರ್ಸ್ ಹೊರಬಿಟ್ಟ ಲೆಕ್ಕ ಇದು. ಇಷ್ಟರಲ್ಲೇ ಸೇನೆಯಿಂದ 320 ಮಂದಿ ಕೊಲೆಯಾಗಿದ್ದಾರೆ. ನಿಜವಾದ ಲೆಕ್ಕ ಇದಕ್ಕೂ ಹೆಚ್ಚಿರಬಹುದೆಂದು ಅದು ಹೇಳಿದೆ.

ಸೇನೆಯು ಕಳೆದ ಗುರುವಾರ ಹನ್ನೊಂದು ಮಂದಿಯನ್ನು ಸೇನೆ ಕೊಂದಿದೆ. ಫೆಬ್ರವರಿಯಲ್ಲಿ ಒಂದನೇ ತಾರೀಕಿನಿಂದ ಜನರಿಂದ ಗೆದ್ದು ಬಂದ ಸರಕಾರವನ್ನು ಸೇನೆಯು ಕಿತ್ತು ಹಾಕಿ ತಾನೇ ಅಧಿಕಾರವನ್ನು ಹಿಡಿದುಕೊಂಡಿದೆ. ನಂತರ ಈವರೆಗೆ 2,981 ಮಂದಿಯನ್ನು ಸೇನೆ ಬಂಧಿಸಿ ಆರೋಪಿ ಹೊರಿಸಿದೆ ಅಥವಾ ಶಿಕ್ಷಿಸಿದೆ ಎಂದು ವರದಿಯಲ್ಲಿದೆ.

ಈ ನಡುವೆ ಸೇನೆಯ ವಿರುದ್ಧದ ದಾಂಧಲೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳ ಹತ್ಯೆ ಆಗಿದೆ. ಇತ್ತೀಚೆಗೆ ಏಳು ವರ್ಷದ ಪುಟ್ಟ ಬಾಲಕಿಯನ್ನು ಮನೆಗೆ ನುಗ್ಗಿದ ಸೇನೆ ಗುಂಡು ಇಟ್ಟು ಕೊಂದು ಹಾಕಿತ್ತು.