ಸನ್ಮಾರ್ಗ ವಾರ್ತೆ
ಮಾಸ್ಕೊ (ರಷ್ಯಾ): ನೇರಪ್ರಸಾರದ ಮೂಲಕ ಚಾನೆಲೊಂದರ ವರದಿಗಾರಿಕೆ ಮಾಡುತ್ತಿದ್ದ ವೇಳೆ ವರದಿಗಾರ್ತಿಯ ಕೈಯ್ಯಲ್ಲಿದ್ದ ಮೈಕ್ ಅನ್ನು ಕಚ್ಚಿಕೊಂಡು ನಾಯಿಯೊಂದು ಓಡಿ ಹೋದ ಘಟನೆ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಮಿರ್ ಟಿವಿಯ ಪತ್ರಕರ್ತ ನಾಡೆಜ್ಡಾ ಸೆರೆಜ್ಕಿನಾ ಎಂಬ ವರದಿಗಾರ್ತಿ ಮುಂಬರುವ ದಿನಗಳ ಹವಾಮಾನದ ಬಗ್ಗೆ ನೇರಪ್ರಸಾರದ ಮೂಲಕ ವೀಕ್ಷಕರಿಗೆ ವಿವರಿಸುತ್ತಿದ್ದಾಗ ಮಾಸ್ಕೊದಲ್ಲಿ ಈ ಘಟನೆ ನಡೆದಿದೆ. ಮೈಕ್ರೊಫೋನ್ ಅನ್ನು ಕಂಡು ಕುತೂಹಲಗೊಂಡ ಗೋಲ್ಡನ್ ಕಲರಿನ ಸಾಕು ನಾಯಿಯೊಂದು ವರದಿಗಾರ್ತಿಯ ಕೈಯಿಂದ ಮೈಕ್ ಕಚ್ಚಿ ಓಡಿ ಹೋದಾಗ ಆಕೆ ಗಲಿಬಿಲಿಗೊಂಡರೂ ತನ್ನ ಮೈಕ್ ಅನ್ನು ಮರಳಿ ಪಡೆಯಲು ನಾಯಿಯನ್ನು ಬೆನ್ನಟ್ಟಿದರು. ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಾಕು ನಾಯಿಯನ್ನು ನಾಯಿಯನ್ನು ಮಾರ್ಟಿನ್ ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ನಾಯಿಯೊಂದಿಗೆ ಅವರು ನೇರಪ್ರಸಾರ ನೀಡಿದರು. ವರದಿಗಾರ ಅಲಿ ಓಜ್ಕೋಕ್ ಎಂಬವರು ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿದ ಬಳಿಕ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿ.
ಕೃಪೆ: Cobrapost












