ಆಲ್ಕೋಹಾಲ್ ಬ್ರಾಂಡ್‌ಗಳ ಲೋಗೊ ಇದ್ದರೆ ಜೆರ್ಸಿ ಧರಿಸಲ್ಲ ಎಂದ ಕ್ರಿಕೆಟಿಗ ಮೊಯೀನ್ ಅಲಿ: ಒಪ್ಪಿಗೆ ಸೂಚಿಸಿದ ಚೆನ್ನೈ

0
8279

ಸನ್ಮಾರ್ಗ ಕ್ರೀಡಾಲೋಕ

ಚೆನ್ನೈ: ಇಂಗ್ಲೆಂಡ್‌ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಯೀನ್ ಅಲಿ ಅವರು, ಈ ಬಾರಿಯ ಐ ಪಿ ಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ತನಗೆ ನೀಡುವ ಜರ್ಸಿಯಲ್ಲಿ ಆಲ್ಕೋಹಾಲ್ ಬ್ರಾಂಡ್‌ಗಳ ಲೋಗೊ ಇದ್ದರೆ ಜೆರ್ಸಿ ಧರಿಸಲ್ಲ ಎಂದು ವಿನಂತಿಸಿದ್ದಾರೆ. ಅವರ ಈ ವಿನಂತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್‌ಮೆಂಟ್ ಒಪ್ಪಿಗೆ ಸೂಚಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಮೊಯೀನ್ ಅಲಿಯವರು ಕ್ರಿಕೆಟಿಗನಾಗಿದ್ದರೂ ತಾನೋರ್ವ ಇಸ್ಲಾಂ ಧರ್ಮದ ಅನುಯಾಯಿ. ಇಸ್ಲಾಂ ಧರ್ಮವು ಮದ್ಯಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಹಾಗಾಗಿ ತನ್ನ ಯಾವುದೇ ಜೆರ್ಸಿಯಲ್ಲಿ ಆಲ್ಕೋಹಾಲ್ ಬ್ರಾಂಡ್‌ಗಳ ಲೋಗೊಗಳು ಇರುವುದು ತನಗೆ ಇಷ್ಟವಿಲ್ಲ. ಆದರಿಂದ ಜರ್ಸಿ ಧರಿಸಲ್ಲ ಎಂದು ವಿನಂತಿಸಿದ್ದಾರೆ. ಅವರ ಈ ವಿನಂತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್‌ಮೆಂಟ್ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿಯಲ್ಲಿ ಎಸ್‌ಎನ್‌ಜೆ 10000 ಲೋಗೋ ಇದೆ. ಇದು ಚೆನ್ನೈ ಮೂಲದ ಎಸ್‌ಎನ್‌ಜೆ ಡಿಸ್ಟಿಲರೀಸ್‌ನ ಬ್ರಾಂಡ್ ಆಗಿದೆ. ಸಿ ಎಸ್ ಕೆ ಮ್ಯಾನೇಜ್‌ಮೆಂಟ್ ಮೊಯೀನ್ ಅವರ ಕೋರಿಕೆಗೆ ಒಪ್ಪಿಗೆ ನೀಡಿದೆ ಮತ್ತು ಅವರ ಜರ್ಸಿಯಿಂದ ಲೋಗೋವನ್ನು ತೆಗೆದುಹಾಕಿದೆ ಎಂದು ತಿಳಿದು ಬಂದಿದೆ.

ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಸಿ ಎಸ್ ಕೆ ತಂಡವು ಮೊಯೀನ್ ಅಲಿಯವರನ್ನು 7 ಕೋಟಿ ರೂ.ಗೆ ಖರೀದಿಸಿತ್ತು. ಕಳೆದ ಮೂರು ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದರು.