ಸನ್ಮಾರ್ಗ ವಾರ್ತೆ
ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಕೇರಳ ಜಮಾಅತ್ ನ ಮಾಜಿ ಅಧ್ಯಕ್ಷ ಮತ್ತು ಮಾಧ್ಯಮಂ ಮೀಡಿಯಾ ಸಂಸ್ಥೆಯ ಮಾಜಿ ಚೇರ್ಮನ್ ಕೂಡ ಆಗಿದ್ದ ಪ್ರೊಫೆಸರ್ ಕೆ ಎ ಸಿದ್ದೀಕ್ ಹಸನ್ (76) ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದಾಗಿ ಹಲವು ಸಮಯದಿಂದ ಕೋಯಿಕೋಡ್ ನಲ್ಲಿರುವ ಮಗನ ಮನೆಯಲ್ಲಿ ಅವರು ವಿಶ್ರಾಂತ ಜೀವನ ನಡೆಸುತ್ತಿದ್ದರು.
ಕೆ.ಎಂ. ಅಬ್ದುಲ್ಲಾ ಮೌಲವಿ ಹಾಗೂ ಪಿ.ಎ. ಖದೀಜಾ ರವರ ಪುತ್ರರಾದ ಇವರಿಗೆ 76 ವರ್ಷ ವಯಸ್ಸಿನವರಾದ ಸಿದ್ದೀಕ್ ಹಸನ್, ಶಾಂತಂಪುರಂ ಅರೆಬಿಕ್ ಕಾಲೇಜಿನಲ್ಲಿ ಎಂ.ಎ.ಅರೆಬಿಕ್ ಅಧ್ಯಯನ ಮಾಡಿ ಧಾರ್ಮಿಕ ಪಂಡಿತರೂ ಆಗಿದ್ದರು.
1990 ರಿಂದ 2005ರ ವರೆಗೆ ನಾಲ್ಕು ಬಾರಿ ಕೇರಳ ಜಮಾಅತೆ ಇಸ್ಲಾಮೀ ಹಿಂದ್ ನ ಅಧ್ಯಕ್ಷರಾಗಿದ್ದ ಅವರು ದೆಹಲಿಯಿಂದ ಕಾರ್ಯಾಚರಿಸುತ್ತಿದ್ದ ವಿಷನ್ 2016 ನ ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಪತ್ನಿ ವಿ ಕೆ ಝುಬೈದರನ್ನೂ ಮಕ್ಕಳಾದ ಫಝಲುರ್ರಹ್ಮಾನ್, ಸಾಬಿರ, ಶರ್ಫುದ್ದೀನ್, ಅನೀಸುರ್ರಹ್ಮಾನ್ ರನ್ನೂ ಮತ್ತು ಅಪಾರ ಬಂಧು ಬಳಗವನ್ನೂ ಅಗಲಿದ್ದಾರೆ.
ಅವರ ನಿಧನಕ್ಕೆ ಜಮಾಅತ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಾದತುಲ್ಲಾಹ್ ಹುಸೈನಿ, ರಾಜ್ಯ ಅಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್ ಸಹಿತ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.












