ಗುಜರಾತ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮತ್ತೆ ಬೆಂಕಿ: 61 ರೋಗಿಗಳ ರಕ್ಷಣೆ

0
788

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಗುಜರಾತಿನಲ್ಲಿ ಪುನಃ ಕೊರೋನ ಕೇರ್ ಸೆಂಟರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಭಾವನಗರದ ಕೊರೋನ ಕೇರ್ ಸೆಂಟರಿನಲ್ಲಿ ಅನಾಹುತ ನಡೆದಿದೆ. ಇಲ್ಲಿ 68 ಮಂದಿ ರೋಗಿಗಳಿದ್ದರು.
ಇವರಲ್ಲಿ 61 ರೋಗಿಗಳನ್ನು ಕೂಡಲೇ ಬೇರೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಬಾಕಿ ಉಳಿದವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ.

ಅಹ್ಮದಾಬಾದಿನಿಂದ 170 ಕಿಲೊಮೀಟರ್ ದೂರದಲ್ಲಿರುವ ಕೇರ್ ಸೆಂಟರಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಟಿವಿಯಲ್ಲಿ ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದ್ದು ಊರವರು ಮತ್ತು ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ವ್ಯಸ್ತವಾಗಿತ್ತು.

ಕಳೆದ ವಾರ ಇದೇ ರೀತಿಯ ಘಟನೆಯಲ್ಲಿ ಕೊರೋನ ಚಿಕಿತ್ಸಾ ಕೇಂದ್ರದಲ್ಲಿ 12 ಮಂದಿ ಸಜೀವದಹನಗೊಂಡಿದ್ದರು. ಇದಾದನಂತರ ಕೊರೋನ ಕೇರ್ ಸೆಂಟರ್ ಮಾಡಿದ ಹೊಟೇಲಿಗೆ ಬೆಂಕಿ ಬಿದ್ದಿತ್ತು. ಆದರೆ ಜನರ ಅಪಾಯದ ವರದಿ ಆಗಿರಲಿಲ್ಲ..