ನಾಲ್ಕು ದಿನ ಯಜ್ಞ ನಡೆಸಿದರೇ ಕೊರೋನ ಮೂರನೇ ಅಲೆ ಭಾರತವನ್ನು ತಲುಪದು: ಸಚಿವೆ ಉಷಾ ಠಾಕೂರ್

0
735

ಸನ್ಮಾರ್ಗ ವಾರ್ತೆ

ಇಂಧೋರ್: ಕೋವಿಡ್-19ಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್‌ರವರು ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

“ನಾಲ್ಕು ದಿನಗಳ ಕಾಲ ‘ಯಜ್ಞ ಚಿಕಿತ್ಸೆ’ ನಡೆಸಿದರೆ ಕೊರೋನ ಮೂರನೇ ಅಲೆ ಭಾರತವನ್ನು ತಲುಪಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇಂದೋರ್‌ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ಶುದ್ಧೀಕರಣಕ್ಕಾಗಿ, ನಾಲ್ಕು ದಿನಗಳ ಕಾಲ ಯಜ್ಞವನ್ನು ಮಾಡಿ. ಇದನ್ನು ಯಜ್ಞ ಚಿಕಿತ್ಸೆ ಎನ್ನುತ್ತಾರೆ, ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತೊಡೆದುಹಾಕಲು ಯಜ್ಞ ಚಿಕಿತ್ಸೆ ಮಾಡುತ್ತಿದ್ದರು. ಇದನ್ನು ಮಾಡುವುದರಿಂದ ಕೋವಿಡ್ ಮೂರನೇ ಅಲೆ ಭಾರತವನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ.

ಸಧ್ಯ ಭಾರತದಲ್ಲಿ ಎರಡನೇ ಅಲೆ ಹಲವು ಸಮಸ್ಯೆ ಸೃಷ್ಟಿಸುತ್ತಿದೆ. ಎರಡನೇ ಅಲೆಯಿಂದ ಭಾರತ ನರಳುತ್ತಿದೆ, ಆರೋಗ್ಯ ಮೂಲ ಸೌಕರ್ಯ ವ್ಯವಸ್ಥೆಯನ್ನೇ ಅಲುಗಾಡಿಸಿದ್ದು, ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತರ ಮೇಲೆ ಅಧಿಕ ಹೊರೆಯಾಗುತ್ತಿದೆ ಎಂದು ಅವರು ಹೇಳಿದರು.