ಸನ್ಮಾರ್ಗ ವಾರ್ತೆ
ಲಕ್ನೋ: ಉತ್ತರ ಪ್ರದೇಶದ ಜೈಲಿನಲ್ಲಿ ನಡೆದ ಗುಂಡು ಹಾರಾಟದಲ್ಲಿ ಮೂವರು ಕೈದಿಗಳು ಸಾವನ್ನಪ್ಪಿದ್ದಾರೆ. ಕೈದಿಯೋರ್ವ ಗುಂಡು ಹಾರಿಸಿ ಇಬ್ಬರನ್ನು ಕೊಂದು ಗುಂಡು ಹಾರಿಸಿ ಕೊಂಡಿದ್ದು, ಬಳಿಕ ಆತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ಚಿತ್ರಕೂಟ ಜಿಲ್ಲೆಯ ಜೈಲಿನಲ್ಲಿ ಘಟನೆ ನಡೆಯಿತೆಂದು ತಿಳಿದು ಬಂದಿದ್ದು, ಪಶ್ಚಿಮ ಉತ್ತರ ಪ್ರದೇಶದ ರೌಡಿ ಮುಕೀಂ ಕಾಲ, ಉತ್ತರ ಉತ್ತರ ಪ್ರದೇಶದ ಡೊನಾಯ ಮಿರಾಸುದ್ದೀನ್ ಎಂಬವರ ಮೇಲೆ ಕೈದಿಗಳಲ್ಲಿ ಒಬ್ಬ ಗುಂಡು ಹಾರಿಸಿದ್ದಾನೆ. ವಿಚಾರಣಾ ಕೈದಿ ಅನ್ಸುಲ್ ದೀಕ್ಷಿತ್ ಇಬ್ಬರನ್ನು ಕೊಲೆ ಮಾಡಿದ್ದಾನೆ. ಜೈಲಿನ ಘರ್ಷಣೆಯ ಸ್ಥಿತಿಯ ವೇಳೆ ಅನ್ಸುಲ್ ದೀಕ್ಷಿತ್ ಪೊಲೀಸ್ ಎನ್ಕೌಂಟರ್ ಗೆ ಬಲಿಯಾಗಿದ್ದಾನೆ.
ಪಶ್ಚಿಮ ಉತ್ತರ ಪ್ರದೇಶದ ರೌಡಿಯಾಗಿದ್ದ ಮುಕೀಂ ಕಾಲಾ, ಶಮ್ಲಿ, ಮುಝಪರ್ನಗರ, ಪಶ್ಚಿಮ ಉತ್ತರ ಪ್ರದೇಶದ ಮೇಲೆ ನಿಯಂತ್ರ ಹೊಂದಿದ್ದ. ಹಲವು ಪ್ರಕರಣಗಳಲ್ಲಿ ಈತ ಜೈಲುಪಾಲಾಗಿದ್ದ. ಫೆಬ್ರುವರಿಯಲ್ಲಿ ಕಾಲಾ ಜೈಲಿನಲ್ಲಿ ಕೊಲೆಯಾಗಿದ್ದಾನೆ ಎಂದು ಕಾಲಾನ ತಾಯಿ ಅಲಾಹಾಬಾದ್ ಹೈಕೋರ್ಟಿನಲ್ಲಿ ದೂರು ನೀಡಿದ್ದರು. ನಂತರ ಜೈಲಿನ ಸುರಕ್ಷೆ ಹೆಚ್ಚಿಸಲಾಗಿತ್ತು.












