ಬಿಜೆಪಿ ಶಾಸಕ ನಾಪತ್ತೆಯಾಗಿದ್ದಾರೆ: ಪತ್ತೆ ಹಚ್ಚಿದವರಿಗೆ ಸಾವಿರ ರೂ. ಬಹುಮಾನ ಘೋಷಿಸಿದ ಗ್ರಾಮಸ್ಥರು..!

0
834

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಕೊರೋನಾ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವುದರ ನಡುವೆ ಬಿಜೆಪಿ ಶಾಸಕ ಕಾಣೆಯಾಗಿದ್ದಾರೆ ಎಂಬ ವ್ಯಂಗ್ಯಾತ್ಮಕ ಪೋಸ್ಟರ್ ಗಳು ಎಲ್ಲೆಡೆ ಕಾಣಿಸ ತೊಡಗಿವೆ. ರಾಮನಗರದ ಬಿಜೆಪಿ ಎಂಎಲ್ಎ ಕಾಣೆಯಾಗಿದ್ದು ಪತ್ತೆ ಹಚ್ಚಿ ಕೊಡುವವರಿಗೆ ಸಾವಿರ ರೂಪಾಯಿ ಬಹುಮಾನ ನೀಡಲಾಗುವುದೆಂದು ಪೋಸ್ಟರ್ ನಲ್ಲಿ ಹೇಳಲಾಗಿದೆ.

ಉತ್ತರ ಪ್ರದೇಶದ ಆಡ್ರಾ ಗ್ರಾಮದಲ್ಲಿ ಈ ಪೋಸ್ಟರ್ ಗಳು ಕಾಣಿಸಿಕೊಂಡಿದ್ದು, ಬಿಜೆಪಿ ಎಂಎಲ್ಎ ಶರದ್ ಅವಸ್ತಿಯ ವಿರುದ್ಧ ಈ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಎಂಎಲ್ಎ ಗ್ರಾಮಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ನೆರವನ್ನು ಕೋರಿ ಗ್ರಾಮಸ್ಥರು ಶಾಸಕರ ಕಚೇರಿಗೂ ಮನೆಗೂ ನುಗ್ಗಿದರಾದರೂ ಅವಸ್ಥಿ ನಾಪತ್ತೆಯಾಗಿರುವುದನ್ನು ಅನುಸರಿಸಿ ಪೋಸ್ಟರ್ ಗಳನ್ನು ಹಾಕಲಾಗಿದೆ. ಪೋಸ್ಟ್ ವೈರಲ್ ಆದ ಸುದ್ದಿ ತಿಳಿದ ಬಳಿಕ ಶಾಸಕ ಅವಸ್ತಿಯವರು ಗ್ರಾಮಕ್ಕೆ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.