ಸನ್ಮಾರ್ಗ ವಾರ್ತೆ
ಬೆಂಗಳೂರು: ರಾಜ್ಯಾದ್ಯಂತ ಲಾಕ್ಡೌನ್ ಬಿಗಿಗೊಳಿಸಲಾಗಿದ್ದು ಒಂದೇ ದಿನದಲ್ಲಿ 2000ಕ್ಕೂ ಹೆಚ್ಚು ವಾಹನಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸರಿಯಾದ ಕಾರಣಗಳಿಲ್ಲದೆ ಅನಾವಶ್ಯಕವಾಗಿ ರಸ್ತೆ ಬಂದ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ತೀರ್ಮಾನಿಸಿದ್ದರು. ತಪಾಸಣೆ ತೀವ್ರಗೊಳಿಸಲಾಗಿದ್ದು 2023 ವಾಹನಗಳು ಪೊಲೀಸರ ವಶವಾಗಿದೆ.
ಲಾಕ್ಡೌನ್ ಆರಂಭವಾದ ಬಳಿಕ ಒಂದೇ ದಿನದಲ್ಲಿ ಮೊದಲ ಬಾರಿಗೆ ಇಷ್ಟು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗ್ಗೆ ಹತ್ತು ಗಂಟೆಯವರೆಗೆ ಆವಶ್ಯಕ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಬಳಕೆ ಅನುಮತಿಯಿದೆ.
ಬೆಳಗ್ಗೆ ಹತ್ತು ಗಂಟೆಯ ನಂತರ ವಾಹನ ತಪಾಸಣೆ ಆರಂಭವಾಗುತ್ತದೆ. ಸಿಟಿ ಪೊಲೀಸ್ ಕಮಿಶನರ್ ಕಮಲ್ ಪಂತ್ರ ಮೇಲ್ನೋಟದಲ್ಲಿ ಕಠಿಣ ಕ್ರಮ ಮುಂದುವರಿಯುತ್ತಿದೆ. ಪ್ರತೀದಿನ ಹಲವು ಕಾರಣಗಳನ್ನು ಹೇಳಿ ಜನರು ವಾಹನದೊಂದಿಗೆ ಹೊರ ಬರುತ್ತಾರೆ. ಇಂತವರ ವಾಹನಗಳನ್ನು ವಶಪಡಿಸಿ ವಿಪತ್ತು ನಿವಾರಣೆ ಕಾನೂನು ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗುತ್ತಿದೆ.












