ಮೂಲೆಗುಂಪು ಮಾಡಲು ಪ್ರಯತ್ನಿಸಿದರೆ ಅಮೂಲ್ಯ ಸ್ನೇಹಿತನನ್ನು ಕಳೆದುಕೊಳ್ಳುವಿರಿ: ಅಮೆರಿಕಕ್ಕೆ ಎಚ್ಚರಿಸಿದ ಟರ್ಕಿ ಅಧ್ಯಕ್ಷ ಉರ್ದುಗಾನ್

0
641

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್: ತನ್ನ ದೇಶವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರೆ ಅಮೆರಿಕವು “ಅಮೂಲ್ಯ ಸ್ನೇಹಿತನನ್ನು ಕಳೆದುಕೊಳ್ಳುವ” ಅಪಾಯವಿದೆ ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಉರ್ದುಗಾನ್ ಮಂಗಳವಾರ ಎಚ್ಚರಿಸಿದ್ದಾರೆ.

ಅಂಕಾರಾ-ವಾಷಿಂಗ್ಟನ್ ಸಂಬಂಧಗಳ ಬಗ್ಗೆ ಟರ್ಕಿಯ ಸರಕಾರಿ ಸುದ್ದಿ ಸಂಸ್ಥೆ ಟಿಆರ್‌ಟಿಗೆ ನೀಡಿದ ಸಂದರ್ಶನದಲ್ಲಿ “ಟರ್ಕಿ ಗಣರಾಜ್ಯವನ್ನು ಮೂಲೆಗುಂಪು ಮಾಡುವವರು ಅಮೂಲ್ಯ ಸ್ನೇಹಿತನನ್ನು ಕಳೆದುಕೊಳ್ಳುತ್ತಾರೆ” ಎಂದು ಹೇಳಿದರು.

ಜೂನ್ 14 ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯ ಮುನ್ನ ಉರ್ದುಗಾನ್ ಅವರ ಹೇಳಿಕೆ ಬಂದಿದೆ. ಅಧಿಕಾರ ವಹಿಸಿಕೊಂಡ ನಂತರ ಟರ್ಕಿಯ ನಾಯಕನೊಂದಿಗೆ ಮಾತನಾಡಲು ಅಮೇರಿಕ ಅಧ್ಯಕ್ಷ ಬಿಡೆನ್ ಈವರೆಗೆ ಆಸಕ್ತಿ ತೋರಿಲ್ಲ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಒಟ್ಟೋಮನ್ ಸಾಮ್ರಾಜ್ಯವು ಅರ್ಮೇನಿಯನ್ ನರಮೇಧವನ್ನು ಅಮೆರಿಕ ಸದ್ಯ ಎತ್ತಿರುವುದು ಟರ್ಕಿಯನ್ನು ಆಕ್ರೋಶಗೊಳಿಸಿದೆ.

ನಮ್ಮ ಉದ್ವಿಗ್ನತೆಗೆ (ಯುಎಸ್ ಜೊತೆ) ಕಾರಣವೇನು? ಅರ್ಮೇನಿಯನ್ ನರಮೇಧ ಎಂದು ಕರೆಯಲ್ಪಡುವ ವಿಚಾರವೇ ಎಂದು ಉರ್ದುಗಾನ್ ಪ್ರಶ್ನಿಸಿದ್ದು, ಅರ್ಮೇನಿಯಾ ಪರವಾಗಿ ವಕಾಲತ್ತು ವಹಿಸುವುದಕ್ಕಿಂತ ವ್ಯವಹರಿಸಲು ನಿಮಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲವೇ ಎಂದು ಕೇಳಿದ್ದಾರೆ. ದೇಶವನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರೆ ಅಮೆರಿಕವು ಅಮೂಲ್ಯ ಸ್ನೇಹಿತನನ್ನು ಕಳೆದುಕೊಳ್ಳಬಹುದು ಎಂದು ಉರ್ದುಗಾನ್ ಹೇಳಿದ್ದಾರೆ.